Home ನಮ್ಮ ಜಿಲ್ಲೆ ಕಲಬುರಗಿ ಅಲ್ಲಂಪ್ರಭು ಪಾಟೀಲರ ಬೆನ್ನು ಚಪ್ಪರಿಸಿ ಶುಭ ಕೋರಿದ ಕಾಂಗ್ರೆಸ್ ಹೈಕಮಾಂಡ್

ಅಲ್ಲಂಪ್ರಭು ಪಾಟೀಲರ ಬೆನ್ನು ಚಪ್ಪರಿಸಿ ಶುಭ ಕೋರಿದ ಕಾಂಗ್ರೆಸ್ ಹೈಕಮಾಂಡ್

0

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ 21 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಹಾಗೂ ಸರಾಸರಿ ಶೇಕಡಾವಾರು 54.74 ರಷ್ಟು ಮತಗಳಿಕೆಯಲ್ಲಿ ಜಿಲ್ಲೆಯಲ್ಲೇ ಎಲ್ಲಕ್ಕಿಂತ ಹೆಚ್ಚಿನ ಸಾಧನೆ ಮಾಡಿ ಗಮನ ಸೆಳೆದಿರುವ ಕಾಂಗ್ರೆಸ್‍ನ ಅಲ್ಲಂಪ್ರಭು ಪಾಟೀಲರಿಗೆ ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಬೆನ್ನು ಚಪ್ಪರಿಸಿ ಶುಭ ಕೋರಿದ್ದಾರೆ.
ಅಲ್ಲಂಪ್ರಭು ಪಾಟೀಲರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಿದ್ದು ಮೊದಲು ಸದಾಶಿವ ನಗರಲ್ಲಿರುವ ಖರ್ಗೆಯವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ಖರ್ಗೆಯವರನ್ನು ಕಂಡು ಗೌರವಿಸಲು ಹೋದಾಗ ಖರ್ಗೆಯವರೇ ತಾವೇ ಮುಂದಾಗಿ ಅಲ್ಲಂಪ್ರಭು ಪಾಟೀಲರಿಗೆ ಹಾರ ಹಾಕುತ್ತ ಶುಭವಾಗಲಿ ಎಂದರು. ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದೀರಿ, ನಿಮಗೆ ಜನರು ಆಶೀರ್ವಾದ ಮಾಡಿದ್ದಾರೆ. ಜನರ ಕೆಲಸಗಳನ್ನೇ ಸದಾಕಾಲ ಮಾಡುತ್ತಿರುವ ನಿಮಗೆ ಸದಾಕಾಲ ಒಳ್ಳೆಯದು ಆಗುತ್ತದೆ ಎಂದು ಹೇಳಿದರು.

Exit mobile version