Home ನಮ್ಮ ಜಿಲ್ಲೆ ಕಲಬುರಗಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಕೆಗೆ ವಿಶೇಷ ಪ್ರಾರ್ಥನೆ

ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಕೆಗೆ ವಿಶೇಷ ಪ್ರಾರ್ಥನೆ

0

ಕಲಬುರಗಿ: ಊರಿನ ಗ್ರಾಮಸ್ಥರು ಮತ್ತು ಹಿರಿಯರು ಸೇರಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸಿಎಂ ಸ್ಥಾನದಿಂದ ಮುಂದುವರೆಯಬೇಕು ಎಂದು ವಿಷೇಶ ಪೊಜೆಮಾಡಿಸಿದರು. ಹಾಗೇ ಸಿಎಂ ಅಧಿಕಾರದಲ್ಲಿದ್ದಾಗ ಜನರಿಗೆ ಮತ್ತು ಮಹಿಳೆಯರಿಗೆ ಮಾಡಿರು ಸೌಲಭ್ಯದ ಕುರಿತು ಮಾತನಾಡಿದರು.

ಊರಿನ ಎಲ್ಲ ಮಹಿಳಾ ಬೆಂಬಲ ಈ ಭಾರಿಯು ಸಿದ್ದರಾಮಯ್ಯನವರಿಗೆ ಎಂದು ಹೇಳಿದರು. ಜೊತೆಗೆ ಅವರ ಮಲಿನ ಅಭಿಮಾನಕ್ಕೆ ಮತ್ತು ಈ ಭಾರಿಯ ಗದ್ದುಯು ಅವರದ್ದೇ ಆಗಲಿ ಎಂಬ ಉದ್ದೇಶದಿಂದ 101 ತೆಂಗಿನಕಾಯಿ ಹರಿಕೆ ಇಡೆರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಹೈಕಮಾಂಡ್ 5 ವರ್ಷ ಪೂರ್ಣಾವಧಿ ಸಿಎಂ ಆಗಿ ಮುಂದುವರಿಸಬೇಕು ಎಂದು ಅಗ್ರಹಿಸಿ ಶುಕ್ರವಾರ ಬೆಳಗ್ಗೆ ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ೧೦೧ ಟೆಂಗಿನ‌ಕಾಯಿ ಒಡೆದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಅಭಿಮಾನಿ ಬಳಗದ ಸಂಚಾಲಕ ಹಾಗೂ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ಮಹಾಂತೇಶ ಕೌಲಗಿ ನೇತೃತ್ವದಲ್ಲಿ ಹಳದಿ ಬಣ್ಣ ಧ್ವಜ, ಹಳದಿ ಅಂಗಿ ಧರಿಸಿಕೊಂಡು‌ ವಿಶೇಷ ವಿಶೇಷ ಪೂಜೆ ಸಲ್ಲಿಸಲಾಯಿತು.

ಆಡಳಿತ ಮಾಡಲು ಮಾನ್ಯ ಸಿದ್ದರಾಮಯ್ಯ ಸಾಹೇಬರಿಗೆ ಅವರಿಗೆಅವಕಾಶ ಕಲ್ಪಿಸಿ ಕೊಡಬೇಕೆಂದು ಪ್ರಾರ್ಥಿಸಿ ಶರಣಬಸವೇಶ್ವರ ದೇವಸ್ಥಾನದಲ್ಲಿ 101 ತೆಂಗಿನ ಕಾಯಿ ಒಡೆದು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಲಾಯಿತು.

ಈ ವೇಳೆ ಶಕ್ತಿ ಯೋಜನೆ ಫಲಾನುಭವಿ ಮಹಿಳೆ‌ ಮಾತನಾಡಿ, ನಮ್ಮ ನಿಜ ತಂದೆ ಸಿದ್ದ ರಾಮಯ್ಯ ಸಾಹೇಬ್ರ ಇದ್ದಾರ. ಅವರಿಗೆ ದೇವರು ಕಾಪಾಡಲಿ ಎಂದು ಪ್ರಾರ್ಥನೆ ಮಾಡಿ‌ ಪೂಜೆ ಸಲ್ಲಿಸಲಾಗಿದೆ ಎಂದರು. ಹಾಗೇ ಅವರು ಸಿಎಂ ಆಗಿ ಮುಂದುವರೆದರೆ ನಮ್ಮಗೆ ಇನ್ನಷ್ಟೂ ಸೌಲಭ್ಯಗಳು ಮತ್ತು ಯೋಜನೆಗಳು ಜಾರಿಗೆ ತರುತ್ತಾರೆ ಎನ್ನುವ ಬರವಸೆ ನಮಗಿದೆ ಎಂದರು.

ಈ ಸಂದರ್ಭದಲ್ಲಿ ಅನನ್ಯ ಡಿಗ್ರಿ ಕಾಲೇಜಿನ ಅಧ್ಯಕ್ಷ ಶರಣು ಹೊನ್ನಗೆಜ್ಜೆ, ಬರಗಾಲಿ, ಪರಮೇಶ ಆಲಗೂಡ, ಅಭಿಮಾನಿಗಳು ಪಾಲ್ಗೊಂಡಿದರು. 101 ತೆಂಗಿನ ಕಾಯಿ ಹರಕೆ ಇಡೆರಿಸಿ ಸಿಎಂ ಮೇಲಿನ ನಿಸ್ವಾರ್ಥ ಅಭಿಮಾವನ್ನ ಮೆರೆದರು.

NO COMMENTS

LEAVE A REPLY

Please enter your comment!
Please enter your name here

Exit mobile version