ಕಲಬುರಗಿ: ಕತ್ತು ಹಿಸುಕಿ ವೃದ್ಧೆಯೋರ್ವಳನ್ನು ಕೊಲೆಗೈದ ಘಟನೆ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಬಳಿಯ ಧಮ್ಮೂರ ಆರ್‌ಸಿ ಕೇಂದ್ರದಲ್ಲಿರುವ ಮನೆಯಲ್ಲಿ ನಡೆದಿದೆ.
ಧಮ್ಮೂರ ಆರ್‌ಸಿ ಕೇಂದ್ರದ ನಿವಾಸಿ ರಾಧಾಬಾಯಿ ಅಣ್ಣಪ್ಪ ಮೇಲಕೇರಿ (70) ಎಂಬಾಕೆ ಕೊಲೆಯಾದ ದುರ್ದೈವಿ. ವೃದ್ಧೆಯನ್ನು ಮನೆಯಲ್ಲೇ ಕೊಲೆ ಮಾಡಲಾಗಿದ್ದು, ಕೊಲೆಗಾರ ಯಾರು? ಕಾರಣವೇನು ಎಂಬುದು ಖಚಿತಪಟ್ಟಿಲ್ಲ.
ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಬಸವರಾಜ ಚಿತ್ತಕೋಟೆ ತಿಳಿಸಿದ್ದಾರೆ.
