ಚಿತ್ರದುರ್ಗ Archives - Samyukta Karnataka

ಕಾಂಗ್ರೆಸ್ ಪಕ್ಷದ ಷಡ್ಯಂತ್ರಕ್ಕೆ ನಾಗೇಂದ್ರ ಬಲಿ
ಚಿತ್ರದುರ್ಗ: ಬಿಜೆಪಿ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ವಿಚಾರವಾಗಿ ಪ್ರತಿಕ್ರಿಯಿಸಿ, ನಾಗೇಂದ್ರಗೆ ಸಚಿವನಾಗಿ ಮಾಡಿದ್ದೇ ಕಾಂಗ್ರೆಸ್‌ನ ತಪ್ಪು. ಬಲಿಪಶು ಮಾಡಲು ಕಾಂಗ್ರೆಸ್‌ನಿಂದಲೇ ನಾಗೇಂದ್ರಗೆ ಮಂತ್ರಿಗಿರಿ ನೀಡಲಾಯಿತು. ಕಾಂಗ್ರೆಸ್ ಪಕ್ಷದ ಷಡ್ಯಂತ್ರಕ್ಕೆ ನಾಗೇಂದ್ರ ಬಲಿಯಾಗಿದ್ದಾರೆ ಎಂದು ಆರೋಪಿಸಿದರು.

ಜನರಿಗೆ ಮರಳು ಮಾಡುವ ಕಾಂಗ್ರೆಸ್‌ನ ಕುತಂತ್ರ ನಡೆಯಬಾರದು. ವಾಲ್ಮೀಕಿ ಹಗರಣದ ದುಡ್ಡು ದಲಿತರದ್ದೇ ಅಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿಗೆ ಗಿಳಿಪಾಠ ಹೇಳುವ ನೈತಿಕತೆ ಇಲ್ಲ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಪರಿಪ್ರಸಾದ್ ಬಗ್ಗೆ ಮಾತನಾಡುವುದು ಬೇಡ. ಯಾರು ಏನೆಂಬುದು ದೇಶಕ್ಕೆ ಗೊತ್ತಿದೆ. ಯೋಚಿಸಿ ಮಾತನಾಡಲಿ. ತನಿಖೆ ಶುರುವಾಗಿದೆ, ಎಲ್ಲವೂ ಬಯಲಾಗುತ್ತದೆ ಎಂದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ಕಾಮಗಾರಿ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಇದೇ ವೇಳೆ ಕೇರಳದ ದಕ್ಷಿಣ ವಿಭಾಗದ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ವಿಭಾಗವನ್ನು ಬೇರ್ಪಡಿಸಿ, ಮಂಗಳೂರು ವಿಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಮಾತನಾಡಿ, ಯಾವುದೇ ನ್ಯೂನತೆ ಇಲ್ಲದೆ ಬೇರ್ಪಡಿಸಿದ್ದೇವೆ. ಕೇರಳದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ, ಪ್ರತಿಭಟನೆ ಮಾಡಲಿ. ನಮ್ಮ ರಾಜ್ಯದಲ್ಲಿ ಒಂದೇ ಬಂದರು ಇದೆ, ಕೇರಳದಲ್ಲಿ 22 ಕಡೆ ಚಟುವಟಿಕೆ ನಡೆಯುತ್ತದೆ. ನಮ್ಮ ಜನವೂ ಬದುಕಬೇಕಲ್ಲ ಎಂದು ಅಧಿಕಾರಿಗಳು, ಸಂಸದರ ಜತೆ ಚರ್ಚಿಸಿ ಕ್ರಮ ಕೈಗೊಂಡಿದ್ದೇವೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

‘ಮನ್‌ ಕಿ ಬಾತ್‌’ನಲ್ಲಿ ಬೆಂಗಳೂರಿನ ನಿಂಗಮ್ಮ ಸಾಧನೆಗೆ ಮೋದಿ ಮೆಚ್ಚುಗೆ

The post ಕಾಂಗ್ರೆಸ್ ಪಕ್ಷದ ಷಡ್ಯಂತ್ರಕ್ಕೆ ನಾಗೇಂದ್ರ ಬಲಿ appeared first on Samyukta Karnataka.

‘ಕಳಪೆ ಕಾಮಗಾರಿ ಕಂಡರೆ ವಾಟ್ಸ್‌ಆ್ಯಪ್‌ನಲ್ಲಿ ತಿಳಿಸಿ’
ಚಿತ್ರದುರ್ಗ: ಹೈವೇ ಹಾಗೂ ರೈಲ್ವೆ ಮಾರ್ಗಗಳು ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಪ್ರಮುಖ ಮೂಲಸೌಕರ್ಯಗಳಾಗಿದ್ದು, ದೇಶದ ಮೂಲೆಮೂಲೆಗಳಲ್ಲೂ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಚಿತ್ರದುರ್ಗದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅನುದಾನಕ್ಕಾಗಿ ಕಾಯದೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 33 ಕಡೆ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇವುಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದರು.

ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕೂ ಆದ್ಯತೆ ನೀಡಲಾಗುತ್ತಿದೆ. ದಾವಣಗೆರೆ–ಚಿತ್ರದುರ್ಗ–ತುಮಕೂರು ರೈಲ್ವೆ ಮಾರ್ಗ ತಮ್ಮ ಕನಸಿನ ಕೂಸಾಗಿದ್ದು, ಸುಮಾರು 217 ಕಿ.ಮೀ. ಉದ್ದದ ರೈಲ್ವೆ ಮಾರ್ಗಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಶೇ. 8ರಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಂಡರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ. ಈ ವರ್ಷದಲ್ಲೇ ನೇರ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ದಾವಣಗೆರೆ–ಚಿತ್ರದುರ್ಗ–ತುಮಕೂರು ರೈಲ್ವೆ ಯೋಜನೆಯಲ್ಲಿ ಸುಮಾರು 10 ಕಿ.ಮೀ. ಕಾಮಗಾರಿ ಮಾತ್ರ ಬಾಕಿಯಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಿದರೆ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ. ಹೊಸ ರೈಲ್ವೆ ಮಾರ್ಗಗಳಿಗಾಗಿ ₹16 ಸಾವಿರ ಕೋಟಿ ಅನುದಾನ ನೀಡಲಾಗಿದೆ. ತಮ್ಮ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು ₹52 ಸಾವಿರ ಕೋಟಿ ಕೇಂದ್ರದ ಅನುದಾನವನ್ನು ತರಲಾಗಿದೆ ಎಂದು ಸೋಮಣ್ಣ ತಿಳಿಸಿದರು.

ಮೇಲ್ಸೇತುವೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಶಾಸಕ ವಿರೇಂದ್ರ ಪಪ್ಪಿ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸೋಮಣ್ಣ ಹೇಳಿದರು. ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕಳಪೆ ಕಾಮಗಾರಿ ಕಂಡುಬಂದರೆ ಸಂಸದರು ಹಾಗೂ ಅಧಿಕಾರಿಗಳ ಗಮನಕ್ಕೆ ತರಬೇಕು. ನಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧ್ಯವಾಗದಿದ್ದರೆ ವಾಟ್ಸ್‌ಆ್ಯಪ್ ಮೂಲಕವೂ ಮಾಹಿತಿ ನೀಡಬಹುದು ಎಂದರು.

‘ಹಗರಣ ಮಾಡುವವರು ನಾವಲ್ಲ. ಹೇಳುವವರು, ಕೇಳುವವರು ಇಲ್ಲದಿದ್ದರೆ ಅದ್ವಾನ ಆಗುತ್ತದೆ. ಮನೆ ಯಜಮಾನ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ’ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.

ಗುತ್ತಿಗೆದಾರರನ್ನು ಸ್ಥಳದಲ್ಲೇ ಪ್ರಶ್ನಿಸಿದ ಸೋಮಣ್ಣ, ಕಾಮಗಾರಿಯನ್ನು ಎಷ್ಟು ತಿಂಗಳಲ್ಲಿ ಪೂರ್ಣಗೊಳಿಸುತ್ತೀರಿ ಎಂದು ಕೇಳಿದರು. ಒಂದೂವರೆ ವರ್ಷ ತೆಗೆದುಕೊಳ್ಳಬೇಡಿ, ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ನಡೆಯುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯ ಉಂಟಾದ ಘಟನೆಗೆ ಸೋಮಣ್ಣ ಕ್ಷಮೆ ಕೋರಿದರು. ತಮ್ಮ ಭಾಷಣದ ವೇಳೆಯೂ ಮೈಕ್ ಕೈಕೊಟ್ಟಾಗ, ‘ಚಿತ್ರದುರ್ಗದಲ್ಲಿ ಸ್ಟಾರ್ಟಿಂಗ್ ಟ್ರಬಲ್ ಅನಿಸುತ್ತೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ಎಡವಟ್ಟುಗಳು ಆಗಿರುವುದನ್ನು ಒಪ್ಪಿಕೊಂಡ ಅವರು, ಇಂತಹ ಘಟನೆಗಳು ಮರುಕಳಿಸದಂತೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗ ಸೇರಿದಂತೆ ಬರಪೀಡಿತ ಪ್ರದೇಶಗಳನ್ನು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸೋಮಣ್ಣ ಹೇಳಿದರು. ಈ ಕುರಿತು ತಾವು ಹಾಗೂ ಸಂಸದ ಎ. ನಾರಾಯಣಸ್ವಾಮಿ ಕಾರಜೋಳ ಸೇರಿ ಪತ್ರ ಬರೆಯುವುದಾಗಿ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಪ್ರಸ್ತಾಪಿಸಿದ ಸೋಮಣ್ಣ, ‘ನಾವು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಹಾಕಬೇಕಲ್ಲ’ ಎಂದು ಹಾಸ್ಯಭರಿತವಾಗಿ ಹೇಳಿದರಲ್ಲದೆ, ಮುಂದಿನ ಚುನಾವಣೆಗೆ ಕಾರಜೋಳ ಅವರನ್ನು ಅಭ್ಯರ್ಥಿಯಾಗಿ ಕರೆತರುತ್ತೇವೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಕರ್ನಾಟಕದ ರೈಲ್ವೆ ಹಾಗೂ ರಸ್ತೆ ಮೂಲಸೌಕರ್ಯಕ್ಕೆ ಮತ್ತಷ್ಟು ಬಲ ದೊರೆಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಮೆಗಾ ಪೊಲೀಸ್ ಕಾರ್ಯಾಚರಣೆ: 1,041 ರೌಡಿಶೀಟರ್‌ಗಳ ಮನೆ ಜಾಲಾಡಿದ ಖಾಕಿ

The post ‘ಕಳಪೆ ಕಾಮಗಾರಿ ಕಂಡರೆ ವಾಟ್ಸ್‌ಆ್ಯಪ್‌ನಲ್ಲಿ ತಿಳಿಸಿ’ appeared first on Samyukta Karnataka.

ಶಾಸಕ ಸಮರ್ಥ ಶಾಮನೂರು ಕಾರು ಅಪಘಾತ: ಓರ್ವನಿಗೆ ಗಾಯ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ದಾವಣಗೆರೆ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ದಾವಣಗೆರೆಗೆ ಶಾಸಕ ಸಮರ್ಥ ಶಾಮನೂರು ಅವರು ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆ.ಆರ್. ಹಳ್ಳಿ ಗೇಟ್ ಬಳಿ ವೇಗವಾಗಿ ಬಂದ ಕಾರೊಂದು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಹಿಂಬದಿಯಿಂದ ಬರುತ್ತಿದ್ದ ಶಾಸಕ ಸಮರ್ಥ ಶಾಮನೂರು ಅವರ ಕಾರು ಪಲ್ಟಿಯಾದ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಶಾಸಕ ಸಮರ್ಥ ಶಾಮನೂರು ಅವರ ಕಾರಿಗೆ ಹಿಂಬದಿಯಿಂದ ಮತ್ತೊಂದು ಎರ್ಟಿಗಾ ಕಾರು ಡಿಕ್ಕಿ ಹೊಡೆದಿದೆ.

ಅಪಘಾತದ ಬಳಿಕ ಶಾಸಕ ಸಮರ್ಥ ಶಾಮನೂರು ಅವರು ಕಾರು ಬದಲಿಸಿಕೊಂಡು ದಾವಣಗೆರೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪಲ್ಟಿಯಾದ ಕಾರಿನಲ್ಲಿದ್ದ ಸಂದೀಪ್ (45) ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ಸೇವೆ ವಿಸ್ತರಣೆ

The post ಶಾಸಕ ಸಮರ್ಥ ಶಾಮನೂರು ಕಾರು ಅಪಘಾತ: ಓರ್ವನಿಗೆ ಗಾಯ appeared first on Samyukta Karnataka.

ಚಿತ್ರದುರ್ಗ: ಸಾಂಸಾರಿಕ ಜೀವನ ಪ್ರವೇಶಿಸಿದ ಕರುನಾಡ ಸ್ಪೈಡರ್‌ಮ್ಯಾನ್
ಸಾಹಸಿಗ ಕೋತಿರಾಜ್ ದಾಂಪತ್ಯ ಜೀವನಕ್ಕೆ: ಚಿತ್ರದುರ್ಗದಲ್ಲಿ ಗಣ್ಯರಿಂದ ಶುಭಾಶಯಗಳ ಮಹಾಪೂರ – ಆಹ್ವಾನ ಇಲ್ಲದಿದ್ದರೂ ಗಣ್ಯರ ಪ್ರೀತಿ

ಈ.ಮಹೇಶಬಾಬು

ಸಂ.ಕ.ಸಮಾಚಾರ, ಚಿತ್ರದುರ್ಗ : ವಿವಾಹ ಸೇರಿ ಶುಭ ಕಾರ್ಯಗಳಿಗೆ ಗಣ್ಯರು ಆಗಮಿಸಿ ಶುಭಹಾರೈಸಬೇಕೆಂಬುದು ಬಹುತೇಕ ಜನರ ಮಹಾದಾಸೆ. ಮನೆ ಬಾಗಿಲಿಗೆ ಖುದ್ದು ಹೋಗಿ ಆಹ್ವಾನ ಪತ್ರಿಕೆ ಕೊಟ್ಟು, ಡೈರಿಯಲ್ಲಿ ಎಂಟ್ರಿ ಮಾಡಿಸಿ, ಹತ್ತಾರು ಬಾರಿ ಫೋನ್ ಮಾಡಿ ಬರಲೇಬೇಕೆಂದು ಪಟ್ಟು ಹಿಡಿದು, ಅವರ ಆಗಮನದ ದಾರಿ ಕಾದರೂ ಕೆಲವೊಮ್ಮೆ ನಿರಾಸೆ ಸಹಜ. ಆದರೆ, ಸಾಹಸಿಗನೊಬ್ಬನ ಮದುವೆ ಸಮಾರಂಭಕ್ಕೆ ಆಹ್ವಾನ ಇಲ್ಲದಿದ್ದರೂ ನೂರಾರು ಮಂದಿ ಖುದ್ದು ಹಾಜರಾಗಿ ಹೂಗುಚ್ಛ ಕೈಗಿಟ್ಟು ಶುಭಹಾರೈಸಿದ ಕ್ಷಣಕ್ಕೆ ಚಿತ್ರದುರ್ಗ ಭಾನುವಾರ ಸಾಕ್ಷಿಕರಿಸಿತು.

ಕೋಟೆಕೊತ್ತಲು, ಜೋಗ್‌ಫಾಲ್ಸ್, ಬೆಟ್ಟಗುಡ್ಡ, ಆಕಾಶದೆತ್ತರದ ಬೃಹತ್ ಕಟ್ಟಡಗಳನ್ನು ನೋಡುಗರು ಉಸಿರು ಬಿಗಿಹಿಡಿದುಕೊಳ್ಳುವಂತೆ ಕೈಜಾರಿ ಬಿದ್ದೇಬಿಟ್ಟಂತೆ ಅಲ್ಲಲ್ಲಿ ಝಲಕ್ ಮೂಲಕ ಕ್ಷಣಾರ್ಧದಲ್ಲಿ ಹತ್ತಿ ಮೇಲೆ ನಿಂತು ಕೈಬಿಸಿ ನಗುವ ಸಾಹಸಿಗನೊಬ್ಬ ಸಾಂಸಾರಿಕ ಜೀವನ ಪ್ರವೇಶಿಸಿದ್ದಾನೆ.

ಈ ವೇಳೆ ಗಣ್ಯಾತೀಗಣ್ಯರು ಹಾಜರಾಗಿ ಶುಭ ಹಾರೈಸಿದ್ದು ವಿಶೇಷ. ತಮಿಳುನಾಡಲ್ಲಿ ಹುಟ್ಟಿ, ಚಿತ್ರದುರ್ಗವನ್ನೇ ಕರ್ಮಭೂಮಿ ಮಾಡಿಕೊಂಡು, ಕರುನಾಡಲ್ಲಿ ಮನೆ ಮಾತಾಗಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ನಗರದ ಮೇದೆಹಳ್ಳಿ ಸಮೀಪದ ವೈಭವ ಗಾರ್ಡನ್ ಮಂಟಪದಲ್ಲಿ ಕೌಟಂಬಿಕ ಜೀವನ ಪ್ರವೇಶಿಸಿದ್ದು,

ಈ ಕ್ಷಣಕ್ಕೆ ಜಿಲ್ಲಾ ಸಚಿವ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಎಎಸ್‌ಪಿ ಶಿವಕುಮಾರ್, ಪಿಐ ಬಾಲಚಂದ್ರ ನಾಯ್ಕ್, ಹಾಲಿ-ಮಾಜಿ ಜನಪ್ರತಿನಿಧಿಗಳು, ಉದ್ಯಮಿಗಳು, ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರಮುಖರು, ಕಿರುತೆರೆ ನಟರು, ನಿರ್ದೇಶಕರು ಸಾಕ್ಷಿಕರಿಸಿದರು.

ಆರ್ಥಿಕವಾಗಿ ಅಷ್ಟಾಗಿ ಸದೃಢನಲ್ಲದ ಕೋತಿರಾಜ್ ವಿವಾಹ ಕಾರ್ಯಕ್ಕೆ ದುರ್ಗದ ಜನ, ಜನಪ್ರತಿನಿಧಿಗಳು, ಅಧಿಕಾರಿಗಳು ನೆರವು ಆಗಿದ್ದಷ್ಟೇ ಅಲ್ಲದೆ, ಒತ್ತಡದ ಮಧ್ಯೆಯೂ ಮದುವೆ ಮಂಟಪಕ್ಕೆ ಆಗಮಿಸಿ ಶುಭಹಾರೈಸಿದ್ದು ಗಮನಸೆಳೆಯಿತು. ತಲೆಗೊಂದು ಕರ್ಚಿಪ್, ಸೊಂಟದಲ್ಲಿ ಚಿಕ್ಕದೊಂದು ಬ್ಯಾಗ್, ಕೈಯಲ್ಲಿ ಗ್ರಿಪ್ ಪೌಡರ್, ದೊಡ್ಡ ನಿಕ್ಕರಲ್ಲಿಯೇ ಸದಾ ಇರುತ್ತಿದ್ದ ಕೋತಿರಾಜ್, ಶನಿವಾರ-ಭಾನುವಾರ ರೇಷ್ಮೆ ಪಂಚೆ, ಜುಬ್ಬಾ, ಪೇಟಾ, ಅರತಕ್ಷತೆ ವೇಳೆ ಶೂಟುಬೂಟಲ್ಲಿ ಕಂಗೊಳಿಸುತ್ತಿದ್ದು ಸಂಭ್ರಮಕ್ಕೆ ಕಾರಣವಾಗಿತ್ತು.

ವರ್ಷ 2000ರಲ್ಲಿ ತಮಿಳುನಾಡಿನಿಂದ ರಾಜ್ಯಕ್ಕೆ ವಲಸೆ ಬಂದು, ವಿಜಾಪುರ ಗೊಲ್ಲರಹಟ್ಟಿಯ ಮನೆಯೊಂದರಲ್ಲಿ ಆಶ್ರಯ ಪಡೆದು, ಚಿತ್ರದುರ್ಗ ನಗರದಲ್ಲಿ ಗಾರೆಕೆಲಸ ಮಾಡಿಕೊಂಡಿದ್ದ ಜ್ಯೋತಿರಾಜ್ ವಿದ್ಯುತ್ ಕಂಬ, ಕಟ್ಟಡಗಳನ್ನು ಚಾಕಚಕ್ಯತೆಯಿಂದ ಹತ್ತುವುದನ್ನು ದುರ್ಗದ ಜನ ಕಂಡು ಬೆರಗಾಗಿದ್ದರು. ಯಾವುದೇ ಪರಿಕರಗಳಿಲ್ಲದೆ ಕೇವಲ ಕೈಯಿಂದಲೇ ಕಲ್ಲುಬಂಡೆಗಳನ್ನು ಕೋತಿ ರೀತಿ ಹತ್ತುವುದನ್ನು ಕಂಡ ಜನರ ಬಾಯಲ್ಲಿ ಕೋತಿರಾಜ್ ಹೆಸರು ಹೊರಹೊಮ್ಮಿದ್ದು, ಆತನ ಸಾಹಸಕ್ಕೆ ಇದೇ ಹೆಸರು ಬಿರುದಾಗಿ ಪರಿಣಮಿಸಿದೆ. ಎಲ್ಲಿಯೇ ಹೋಗಲಿ ಜನ ಕೋತಿರಾಜ್ ಎಂದೇ ಗುರುತಿಸುತ್ತಾರೆ.

ಓಡಿಶಾ ರಾಜ್ಯ ಸಾಹಸ ಕ್ರೀಡೆ ಹಾಗೂ ಮತದಾನ ಜಾಗೃತಿ ರಾಯಭಾರಿ ಆಗಿ ಸೇವೆ ಸಲ್ಲಿಸಿರುವ ಜ್ಯೋತಿರಾಜ್ ಜೀವನಗಾಥೆ ಕುರಿತ ಚಲನಚಿತ್ರ ತೆರೆ ಕಂಡಿದ್ದು, ಎಂಟತ್ತು ವರ್ಷದ ಹಿಂದೆಯೇ ವಿವಾಹ ಆಗಬೇಕಾಗಿತ್ತು. ಆದರೆ, ಜೋಗ್‌ಫಾಲ್ಸನಲ್ಲಿ ಬಿದ್ದು ಸೊಂಟ-ಕಾಲು ಮುರಿದುಕೊಂಡಿದ್ದರಿಂದ ನಿಗದಿ ಆಗಿದ್ದ ಮದುವೆಯೇ ಮುರಿದುಬಿದ್ದಿತ್ತು. ಆದರೆ, ಎಂತಹ ಕಲ್ಲುಹೃದಯವನ್ನೇ ಅಲುಗಾಡಿಸುವ ರೀತಿ ಕಲ್ಲಿನಕೋಟೆ ಹತ್ತುವ ಸ್ಪೈಡರ್ ಮ್ಯಾನ್ ಸಾಹಸದ ದೃಶ್ಯವನ್ನು ಕಣ್ಣಾರೆ ಕಂಡಿರುವ ಈತನ ದೂರದ ಸಂಬಂಧಿ ದೊಡ್ಡಉಳ್ಳಾರ್ತಿ ಗ್ರಾಮದ ನಿವೇದಿತಾ ಮಂಕಿಮ್ಯಾನ್ ಜೀವನದಲ್ಲಿ ಧೈರ್ಯವಾಗಿ ಪ್ರವೇಶಿಸಿದ ಕ್ಷಣ ಕೋಟೆನಾಡು ಜನರ ಮಟ್ಟಿಗೆ ಸಂಭ್ರಮವಾಗಿತ್ತು.

ನಿವೇದಿತಾ ನಿನಗಿಂತಲೂ ಧೈರ್ಯವಂತೆ
ಏ ಮಂಕಿಮ್ಯಾನ್ ನೀ ಕರೆಯದಿದ್ರೂ ಮದುವೆ ವಿಷಯ ಗೊತ್ತಾಗಿ ನಮ್ಮೂಡ್ಗನೆಂಬ ಅಭಿಮಾನಕ್ಕೆ ಬಂದಿದ್ದೇವೆ, ನಿನಗೆ ಒಳ್ಳೆಯದು ಆಗ್ಲಿ, ನಿನ್ನ ಸಾಹಸದ ಹುಚ್ಚಾಟಕ್ಕೆ ಬೆಚ್ಚದೆ ನಿನ್ನ ಕೈಹಿಡಿಯುತ್ತಿರುವ ನಮ್ ಜಿಲ್ಲೆಯ ಹುಡುಗಿ ನಿವೇದಿತಾ ನಿನಗಿಂತಲೂ ಧೈರ್ಯವಂತೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಇನ್ಮುಂದೆ ಸಾಹಸದ ವೇಳೆ ಸೆಫ್ಟಿ ವಸ್ತು ಬಳಸಬೇಕೆಂಬ ಬಹುತೇಕ ಗಣ್ಯರ ಪ್ರೀತಿಯ ಕಿವಿಮಾತುಗಳು ಮದುವೆ ಮಂಟಪದಲ್ಲಿ ಗಮನಸೆಳೆದವು.

ಇನ್ಮುಂದೆ ಸೆಫ್ಟಿ : ಕೋಟೆ, ಕಟ್ಟಡ ಹತ್ತುವ ವೇಳೆ ಜಾಗ್ರತೆ ವಹಿಸುತ್ತೇನೆ. ನನ್ನನ್ನೇ ನಂಬಿಕೊಂಡಿರುವ ಜೀವವೊಂದು ಇದೆ ಎಂಬ ಅರಿವು ನನ್ನಲ್ಲಿರಲಿದೆ. ಇನ್ಮುಂದೆ ಸೆಫ್ಟಿ ವಸ್ತು ಬಳಸದೆ ಸಾಹಸ ಮಾಡುವುದಿಲ್ಲ ಎನ್ನುತ್ತಾರೆ ಕೋತಿರಾಜ್.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಚಿತ್ರದುರ್ಗ: ಸಾಂಸಾರಿಕ ಜೀವನ ಪ್ರವೇಶಿಸಿದ ಕರುನಾಡ ಸ್ಪೈಡರ್‌ಮ್ಯಾನ್ appeared first on Samyukta Karnataka.

KPSC ಹಗರಣದ ತನಿಖೆ ಚುರುಕು: ಚಿತ್ರದುರ್ಗದಲ್ಲಿ ED ದಾಳಿ
ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೆಪಿಎಸ್ಸಿ ಹಗರಣ ಪ್ರಕರಣದಲ್ಲಿ ಎ13 ಆರೋಪಿಯಾಗಿರುವ ನವೀನ್ ಕುಮಾರ್, ತಂದೆ ನಾಗರಾಜಪ್ಪ ಅವರ ನಿವಾಸದ ಮೇಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಎರಡು ವಾಹನಗಳಲ್ಲಿ ಆಗಮಿಸಿದ ED ತಂಡದಲ್ಲಿ ಮೂವರು ಅಧಿಕಾರಿಗಳು ಹಾಗೂ ಇಬ್ಬರು CRPF ಸಿಬ್ಬಂದಿ ಇದ್ದರು.

ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ₹70ರಿಂದ ₹80 ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದೆ. ಈ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಸನ ಮೂಲದ ಮಂಜುನಾಥ್ ಎಂಬವರು ದೂರು ನೀಡಿದ್ದರು.

ಈ ಪ್ರಕರಣದ ಭಾಗವಾಗಿ ಜುಲೈ 25, 2026ರಂದು ಒಟ್ಟು 29 ಮಂದಿ ವಿರುದ್ಧ ದೂರು ದಾಖಲಾಗಿತ್ತು ಎನ್ನಲಾಗಿದ್ದು, ತನಿಖೆಯ ಮುಂದುವರಿದ ಭಾಗವಾಗಿ ED ಅಧಿಕಾರಿಗಳು ನವೀನ್ ಕುಮಾರ್ ಅವರ ಮನೆಯಲ್ಲಿ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ನಡೆಸಿದ್ದಾರೆ.

KPSC ನೇಮಕಾತಿ ಹಗರಣದ ಕುರಿತು ಈಗಾಗಲೇ ಚಿತ್ರದುರ್ಗದಲ್ಲೂ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿವೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post KPSC ಹಗರಣದ ತನಿಖೆ ಚುರುಕು: ಚಿತ್ರದುರ್ಗದಲ್ಲಿ ED ದಾಳಿ appeared first on Samyukta Karnataka.

ಮದುವೆ ಸಂಭ್ರಮದ ಬೆನ್ನಲ್ಲೇ ನವವಧುವಿನ ದುರಂತ ಅಂತ್ಯ
ಚಿತ್ರದುರ್ಗ: ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ನವವಿವಾಹಿತೆಯೊಬ್ಬಳು ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ತಾಲೂಕಿನ ಎನ್. ಮಹದೇವಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಚಳ್ಳಕೆರೆ ತಾಲ್ಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ಕಾರಿನಪಾಲಯ್ಯನಹಟ್ಟಿ ನಿವಾಸಿ ಸುಮಲತಾ (21) ಮೃತ ದುರ್ದೈವಿ. ಸುಮಲತಾ ತನ್ನ ಸಂಬಂಧಿಯೂ ಆಗಿದ್ದ ಗಜೇಂದ್ರ ಎಂಬ ಕುರಿಗಾಹಿಯನ್ನು ಕಳೆದ ಕೆಲ ಕಾಲದಿಂದ ಪ್ರೀತಿಸುತ್ತಿದ್ದಳು. ಇದೇ ವಿಚಾರವಾಗಿ ಕಳೆದ ಗುರುವಾರ ಆಕೆ ತನ್ನ ಸ್ವಗ್ರಾಮದಿಂದ ನಾಪತ್ತೆಯಾಗಿದ್ದಳು.

ತನ್ನ ಸಂಬಂಧಿಕರಾದ ಬೋರೇಶ ಹಾಗೂ ಅಶೋಕ ಎಂಬುವವರ ಜೊತೆ ಬೈಕ್ ಮೂಲಕ ಚಳ್ಳಕೆರೆ-ನಾಯಕನಹಟ್ಟಿ ಮಾರ್ಗವಾಗಿ ಎನ್. ಮಹದೇವಪುರ ಗ್ರಾಮದ ಹೊರವಲಯದಲ್ಲಿದ್ದ ಕುರಿ ದೊಡ್ಡಿಯೊಂದಕ್ಕೆ ಬಂದು ಗುರುವಾರ ರಾತ್ರಿ ಅಲ್ಲಿಯೇ ತಂಗಿದ್ದರು.

ಬಳಿಕ ಶುಕ್ರವಾರ ಮಧ್ಯಾಹ್ನ ಬೋರೇಶ ಮತ್ತು ಅಶೋಕ ಸೇರಿ ರಾಮಸಾಗರದ ಸಮೀಪವಿರುವ ಈಶ್ವರನತಿಪ್ಪೆ ಎಂಬಲ್ಲಿನ ದೇವಸ್ಥಾನದಲ್ಲಿ ಗಜೇಂದ್ರ ಹಾಗೂ ಸುಮಲತಾ ಅವರ ವಿವಾಹವನ್ನು ನೆರವೇರಿಸಿದ್ದರು. ಮದುವೆಯಾದ ಸಂಭ್ರಮದ ಫೋಟೋಗಳನ್ನು ಯುವತಿಯ ಪೋಷಕರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿಕೊಡಲಾಗಿತ್ತು.

ಮದುವೆ ಮುಗಿಸಿಕೊಂಡು ನವದಂಪತಿಗಳು ನೇರವಾಗಿ ಮತ್ತೆ ಅದೇ ಕುರಿದೊಡ್ಡಿ ಬಳಿ ಬಂದಿದ್ದಾರೆ. ಈ ವೇಳೆ ಶೌಚಾಲಯಕ್ಕೆಂದು ಹೋದ ಸುಮಲತಾ ಬಹಳ ಹೊತ್ತಾದರೂ ಹಿಂದಿರುಗಲಿಲ್ಲ. ಆತಂಕಗೊಂಡ ಗಜೇಂದ್ರ ಹಾಗೂ ಆತನ ಸ್ನೇಹಿತರು ಸುತ್ತಮುತ್ತ ಹುಡುಕಾಡಿದರೂ ಆಕೆಯ ಸುಳಿವು ಸಿಗಲಿಲ್ಲ.

ಇತ್ತ ಮಗಳು ನಾಪತ್ತೆಯಾಗಿರುವ ಬಗ್ಗೆ ಸುಮಲತಾಳ ಪೋಷಕರು ಶನಿವಾರ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆಕೆ ಗಜೇಂದ್ರನೊಂದಿಗೆ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಭಾನುವಾರ ಸಂಜೆ ಎನ್. ಮಹದೇವಪುರ ಗ್ರಾಮದ ಕುರಿರೊಪ್ಪದ ಸಮೀಪದ ಪಾಳುಬಿದ್ದ ಬಾವಿಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣವನ್ನು ಮೊಳಕಾಲ್ಮೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಾನಸಿಕ ಅಸ್ವಸ್ಥೆ ಅತ್ಯಾಚಾರ: ಏಳು ಜನರ ಬಂಧನ

The post ಮದುವೆ ಸಂಭ್ರಮದ ಬೆನ್ನಲ್ಲೇ ನವವಧುವಿನ ದುರಂತ ಅಂತ್ಯ appeared first on Samyukta Karnataka.

ಸರಣಿ ಅಪಘಾತ: ಇಬ್ಬರು ಸಾವು
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ದೊಡ್ಡಸಿದ್ದವ್ವನಹಳ್ಳಿ ಬಳಿ ಶುಕ್ರವಾರ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ಬೆಂಗಳೂರು ಮೂಲದ ಕಾರು ಚಾಲಕ ಗೋಪಿ (43), ಮತ್ತೊಂದು ಕಾರಿನ ಚಾಲಕ ಪವನ್ (23) ಮೃತಪಟ್ಟವರು. ಅಪಘಾತದಲ್ಲಿ ಮಂಜುನಾಥ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಈ ವೇಳೆ ವೇಗವಾಗಿ ಬಂದ ಲಾರಿ ಎರಡೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ. ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ

The post ಸರಣಿ ಅಪಘಾತ: ಇಬ್ಬರು ಸಾವು appeared first on Samyukta Karnataka.

ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಚಿತ್ರದುರ್ಗ: ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಬೆಂಗಳೂರು ಮೂಲದ ಕಾರು ಚಾಲಕ ಗೋಪಿ (43) ಹಾಗೂ ಮತ್ತೋರ್ವ ಕಾರು ಚಾಲಕ ಪವನ್ (23) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಂಜುನಾಥ್ ಎಂಬುವರಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡಸಿದ್ದವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುವ ಸಾಧ್ಯತೆ ಇದೆ. ಅಪಘಾತದ ಬಳಿಕ ಪರಾರಿಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಅಪಘಾತದ ನಿಖರ ಕಾರಣ ಹಾಗೂ ಲಾರಿಯ ಚಾಲಕನ ಕುರಿತು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು appeared first on Samyukta Karnataka.

ಪ್ರಾಂಶುಪಾಲರ ಬಡ್ತಿ ವಂಚನೆ: ಉಪನ್ಯಾಸಕರ ನಿವೃತ್ತಿ ನೋವು!
ಮೂವತ್ತು ವರ್ಷ ಸೇವೆಗೆ ಸಿಗದ ಬಡ್ತಿ : ನನಸಾಗದ ಪ್ರಾಂಶುಪಾಲರಾಗುವ ಉಪನ್ಯಾಸಕರ ಕನಸು – ಸಿದ್ದು, ಖರ್ಗೆ ಪತ್ರಕ್ಕೂ ಕಿಮ್ಮತ್ತಿಲ್ಲ

ಈ.ಮಹೇಶಬಾಬು

ಸಂ.ಕ.ಸಮಾಚಾರ, ಚಿತ್ರದುರ್ಗ : ಗುರು ಬ್ರಹ್ಮ, ಗುರು ವಿಷ್ಣು ಎಂಬ ಗೌರವಕ್ಕೆ ಪಾತ್ರರಾಗಿರುವ ಉಪನ್ಯಾಸಕರು ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಹಕ್ಕುಗಳು ಲಭಿಸದೆ ನಿವೃತ್ತಿ ಹೊಂದುತ್ತಲೇ ಇದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೇರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲ ಬಡ್ತಿ ಹೊಂದುವ ಉಪನ್ಯಾಸಕರುಗಳ ಕನಸು ನನಸಾಗುತ್ತಿಲ್ಲ.

ರಾಜ್ಯದ ಸರ್ಕಾರಿ ಕಾಲೇಜ್‌ಗಳಲ್ಲಿ 7,500, ಅನುದಾನಿತ ಕಾಲೇಜ್‌ಲ್ಲಿ 3,700 ಉಪನ್ಯಾಸಕರಿದ್ದು, ಇವರಲ್ಲಿ ಮುಂಬಡ್ತಿಗಾಗಿ 400 ಮಂದಿ ಸಿಆರ್ ಸಲ್ಲಿಸಿದ್ದು, ಇವರಲ್ಲಿ ಪ್ರತಿ ತಿಂಗಳು 10ಕ್ಕಿಂತಲೂ ಹೆಚ್ಚು ಮಂದಿ ನಿವೃತ್ತಿ ಆಗುತ್ತಿದ್ದಾರೆ. ನೂರಾರು ಪ್ರಾಂಶುಪಾಲರ ಹುದ್ದೆ ಖಾಲಿಯಿದ್ದರೂ ಬಡ್ತಿ ನೀಡುವಲ್ಲಿ ಆಡಳಿತ ಯಂತ್ರ ವಿಳಂಬ ಮಾಡುತ್ತಿದ್ದು, ತಮ್ಮದಲ್ಲದ ತಪ್ಪಿಗೆ ಉಪನ್ಯಾಸಕ ಹುದ್ದೆಯಲ್ಲೇ ನಿವೃತ್ತಿ ಹೊಂದುತ್ತಿದ್ದಾರೆ.

ಇದು ಒಬ್ಬಿಬ್ಬರ ಕಥೆಯಲ್ಲ. ರಾಜ್ಯದಾದ್ಯಂತ ನೂರಾರು ಹಿರಿಯ ಉಪನ್ಯಾಸಕರು ಇದೇ ನೋವಿನಲ್ಲಿದ್ದಾರೆ. 2016ರಿಂದ ಮೀಸಲಾತಿ ಪಟ್ಟಿ ಸರಿಯಾಗಿ ಪಾಲನೆಯಾಗದೆ 80 ಪ್ರಾಂಶುಪಾಲರ ಹುದ್ದೆಗಳನ್ನು ವಂಚಿಸಲಾಗಿದೆ ಎಂಬ ಸತ್ಯವನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.

ವರದಿ ಒಪ್ಪಿಕೊಳ್ಳಲ್ಲ, ಒಂದು ಹುದ್ದೆಯೂ ಕೊಡಲು ಬರುವುದಿಲ್ಲ ಎಂಬ ಹಠ ಇಲಾಖೆ ಮಾಡುತ್ತಿದೆ. ಈ ಮಧ್ಯೆ ಸಮಾಜ ಕಲ್ಯಾಣ ಇಲಾಖೆಯ ವರದಿಯನ್ನು ಅನುಷ್ಠಾನಗೊಳಿಸುವಂತೆ ಕಲ್ಯಾಣ ಸಮಿತಿ ತಾಕೀತು ಮಾಡುತ್ತಲೇ ಇದೆ. ವರದಿ ಜಾರಿಗೊಂಡಿದ್ದಲ್ಲಿ 90 ಅರ್ಹ ಉಪನ್ಯಾಸಕರು ಜುಲೈ 2026ರಲ್ಲಿ ಪ್ರಾಂಶುಪಾಲರಾಗಿ ಬಡ್ತಿ ಪಡೆದು ನಿವೃತ್ತರಾಗಬೇಕಿತ್ತು. ಆದರೆ, ಅರ್ಹರಿಗೆ ಬಡ್ತಿ ಇಲ್ಲ, ಅನುಭವಕ್ಕೆ ಬೆಲೆ ಇಲ್ಲ, ಸೇವಾ ಹಿರಿತನಕ್ಕೆ ಗೌರವಿಲ್ಲದಂತಾಗಿದೆ ಎಂಬಂತಾಗಿದೆ.

ಇದು ಕೇವಲ ಆಡಳಿತದ ಲೋಪವಲ್ಲ. 10 ವರ್ಷಗಳಿಂದ ರೋಸ್ಟರ್ ಬಿಂದು ಅನುಸರಿಸದೆ, ಮೀಸಲಾತಿ ಪಟ್ಟಿ ಜಾರಿ ಮಾಡದೆ ಇರುವುದು ಸಂವಿಧಾನಾತ್ಮಕ ಹಕ್ಕು ಉಲ್ಲಂಘನೆ ಆಗಿದೆಯೆಂಬುದು ಉಪನ್ಯಾಸಕರ ಆಕ್ರೋಶ. ಸೇವಾವಧಿ ಅಂಚಿನಲ್ಲಿ ಒಂದಿಷ್ಟು ದಿನ ಪ್ರಾಂಶುಪಾಲ ಕುರ್ಚಿಯಲ್ಲಿ ಕುಳಿತು ಕಾರ್ಯನಿರ್ವಹಿಸಬೇಕೆಂಬ ಆಸೆ ಸಹಜ.

ಡಿಸೆಂಬರ್ 2025ರಲ್ಲಿ ಇಲಾಖೆ ಗೌಪ್ಯ ವರದಿ ಕೇಳಿದಾಗ ಆಸೆಗೆ ಜೀವ ಬಂದಿತ್ತು. ಆದರೆ, ಆಗಸ್ಟ್ 2026 ಬಂದರೂ ಬಡ್ತಿ ಭಾಗ್ಯ ದೊರೆಯುತ್ತಿಲ್ಲ. ಈ ಅನ್ಯಾಯ ಸರಿಪಡಿಸುವಂತೆ 2025 ಜುಲೈ ತಿಂಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬರೆದಿದ್ದು, ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರಾದರೂ ಕ್ರಮಕೈಗೊಳ್ಳಬೇಕಿದೆ.

ಸದನದಲ್ಲಿ ಧ್ವನಿಯೆತ್ತಲಿ : ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ನ್ಯಾಯ ದೊರಕಿಸಿಕೊಡಬೇಕಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಬಡ್ತಿ ಕೊಡಿಸಲು ಶ್ರಮಿಸಬೇಕು. ಮುಖ್ಯವಾಗಿ ವಿಧಾನಸಭೆ ಅಧಿವೇಶದಲ್ಲಿ ಧ್ವನಿಯೆತ್ತಬೇಕು.

ಹಕ್ಕೋತ್ತಾಯ : ಪ್ರಾಂಶುಪಾಲರ ನೇಮಕಕ್ಕೆ ಪ್ರತ್ಯೇಕ ನಿಗದಿತ ಕಾಲಮಿತಿಯ ವೃಂದದ ಬಡ್ತಿ ನಿಯಮ ರೂಪಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಮೀಸಲಾತಿ ಪಟ್ಟಿ ಲೆಕ್ಕ ಪರಿಶೋಧನೆ ಮಾಡಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಬಡ್ತಿ ತಪ್ಪಿದ್ದರಿಂದ ನಷ್ಟವಾದ ವೇತನ ಮತ್ತು ನಿವೃತ್ತರಾದವರ ಪಿಂಚಣಿ ವ್ಯತ್ಯಾಸವನ್ನು ಬಾಕಿ ಸಹಿತ ನೀಡಬೇಕು. ನಿವೃತ್ತರಾದವರನ್ನು ಗೌರವ ಪ್ರಾಂಶುಪಾಲರೆಂದು ಪರಿಗಣಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಕಲ್ಯಾಣ ಸಮಿತಿ ಮತ್ತು ಪಿಯು ಶಿಕ್ಷಣ ಇಲಾಖೆಯ ಜಂಟಿ ಸಮಿತಿ ರಚಿಸಿ ಪ್ರತಿ ತಿಂಗಳು ಪ್ರಗತಿ ಪರಿಶೀಲಿಸಬೇಕು.

The post ಪ್ರಾಂಶುಪಾಲರ ಬಡ್ತಿ ವಂಚನೆ: ಉಪನ್ಯಾಸಕರ ನಿವೃತ್ತಿ ನೋವು! appeared first on Samyukta Karnataka.

ಹಿಂದೂ ರಾಷ್ಟ್ರ ವಿಚಾರ ರಾಜಕೀಯಕ್ಕಷ್ಟೇ: 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ
2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ: ಚಿತ್ರದುರ್ಗದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ವಿಶ್ವಾಸ

ಚಿತ್ರದುರ್ಗ: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನರ್‌ರಚನೆ, ನಾಯಕತ್ವ ಹಾಗೂ ವಿವಿಧ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಸಚಿವ ಜಮೀರ್ ಅಹ್ಮದ್ ಖಾನ್ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಹಲವು ಪ್ರಮುಖ ವಿಚಾರಗಳಿಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರದ ಸ್ಥಿರತೆ, ಸಚಿವ ಸ್ಥಾನ ಹಂಚಿಕೆ, ಹಿಂದೂ ರಾಷ್ಟ್ರದ ಚರ್ಚೆ ಹಾಗೂ ವಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಮೂಲಕ ಅವರು ಕಾಂಗ್ರೆಸ್ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

‘ರಿಯಲ್ ಎಸ್ಟೇಟ್ ಸರ್ಕಾರ’ ಆರೋಪಕ್ಕೆ ತಿರುಗೇಟು : ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರವನ್ನು “ರಿಯಲ್ ಎಸ್ಟೇಟ್ ಸರ್ಕಾರ” ಎಂದು ಟೀಕಿಸಿರುವ ಕುರಿತು ಪ್ರಶ್ನಿಸಿದಾಗ, ಜಮೀರ್ ಅಹ್ಮದ್ ಖಾನ್ ಅದನ್ನು ತಳ್ಳಿಹಾಕಿದರು. “ಆರ್. ಅಶೋಕ್ ಅವರಿಗೆ ಏನು ಬೇಕಾದರೂ ಹೇಳುವ ಸ್ವಾತಂತ್ರ್ಯ ಇದೆ. ಆದರೆ ಜನರು ಕಾಂಗ್ರೆಸ್ ಸರ್ಕಾರದ ಕೆಲಸವನ್ನು ನೋಡುತ್ತಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಿಂದೂ ರಾಷ್ಟ್ರ’ ವಿಚಾರ ರಾಜಕೀಯಕ್ಕಷ್ಟೇ : ಸಚಿವ ಯತೀಂದ್ರ ಅವರ ಹಿಂದೂ ರಾಷ್ಟ್ರ ಕುರಿತ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜಮೀರ್, ಭಾರತವು ಎಲ್ಲಾ ಧರ್ಮ ಮತ್ತು ಸಮುದಾಯಗಳ ಸಹಬಾಳ್ವೆಯ ದೇಶ ಎಂದು ಹೇಳಿದರು. “ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಸಮಾಜದ ಜನರೂ ತಮ್ಮ ತ್ಯಾಗ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಾತ್ರ ಕೆಲವರು ಹಿಂದೂ ರಾಷ್ಟ್ರದ ವಿಚಾರವನ್ನು ಮುಂದಕ್ಕೆ ತರುತ್ತಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟರು.

ಸಚಿವ ಸ್ಥಾನ ಸಿಗದವರ ಅಸಮಾಧಾನ ಸಹಜ : ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತ ಅಸಮಾಧಾನಗಳ ಬಗ್ಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪಿದವರ ಅಸಮಾಧಾನ ಸಹಜ ಎಂದು ಹೇಳಿದರು. “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲರೊಂದಿಗೂ ಮಾತನಾಡುತ್ತಿದ್ದಾರೆ. ಅವರೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ನನಗೆ ಯಾವುದೇ ಖಾತೆ ಕೊಟ್ಟರೂ ನಾನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಈ ಖಾತೆಯೇ ಬೇಕು ಎಂದು ಕೇಳುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

‘ಹಣ ಕೊಟ್ಟರೆ ಸಚಿವ ಸ್ಥಾನ’ ಎಂಬುದು ಕೇವಲ ಊಹಾಪೋಹ : ಸಚಿವ ಸ್ಥಾನ ಪಡೆಯಲು ಹೈಕಮಾಂಡ್‌ಗೆ ಹಣ ನೀಡಬೇಕು ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಜಮೀರ್, ಅಂತಹ ಮಾತುಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದರು. “ಹೈಕಮಾಂಡ್ ಸಚಿವರನ್ನು ಆಯ್ಕೆ ಮಾಡುವಾಗ ವಿವಿಧ ಸರ್ವೆ ವರದಿಗಳು, ಜನರ ಅಭಿಪ್ರಾಯ ಹಾಗೂ ಆಡಳಿತ ಸಾಮರ್ಥ್ಯವನ್ನು ಪರಿಗಣಿಸುತ್ತದೆ. ಹಣ ಕೊಟ್ಟರೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಕೇವಲ ಊಹಾಪೋಹ” ಎಂದು ಅವರು ಸ್ಪಷ್ಟನೆ ನೀಡಿದರು.

ನಾಗೇಂದ್ರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ : ಸಚಿವ ಬಿ. ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿರುವ ವಿಚಾರ ಕೇಳಿದಾಗ, “ಈಗ ಕೇಸ್ ಎಲ್ಲಿದೆ?” ಎಂದು ಪ್ರಶ್ನಿಸಿದ ಜಮೀರ್, ಕೆಲವರು ರಾಜಕೀಯವಾಗಿ ತಮ್ಮ ಬೆಳವಣಿಗೆಯನ್ನು ಸಹಿಸದೆ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ಸ್ಥಿರವಾಗಿದೆ ಎಂಬ ವಿಶ್ವಾಸ : ರಾಜ್ಯ ಸರ್ಕಾರದ ಭವಿಷ್ಯದ ಬಗ್ಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಸರ್ಕಾರ ಸಂಪೂರ್ಣ ಸ್ಥಿರವಾಗಿದ್ದು, ಮುಂದಿನ ಚುನಾವಣೆಯಲ್ಲಿಯೂ ಜನರ ಆಶೀರ್ವಾದದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಅವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಹಿಂದೂ ರಾಷ್ಟ್ರ ವಿಚಾರ ರಾಜಕೀಯಕ್ಕಷ್ಟೇ: 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ appeared first on Samyukta Karnataka.