ಕಂದಹಾರ್‌ ವಿಮಾನ ಹೈಜಾಕ್‌ ಮಾಸ್ಟರ್‌ಮೈಂಡ್‌ ಅಬ್ದುಲ್‌ ರೌಫ್‌ ಅಜರ್‌ ಫಿನಿಶ್‌

0
23

ಇಸ್ಲಾಮಾಬಾದ್​​: ಭಾರತೀಯ ಸೇನೆ ನಡೆಸಿದ ಆಪರೇಷನ್​ ಸಿಂದೂರ ವೇಳೆ ಪಾಕಿಸ್ತಾನದ ಜೈಷ್​ ಉಗ್ರ ಹಾಗೂ ಐಸಿ 814 ಕಂದಹಾರ್ ವಿಮಾನ ಅಪಹರಣದ ಹಿಂದಿನ ಮಾಸ್ಟರ್ ಮೈಂಡ್ ಅಬ್ದುಲ್ ರೌಫ್ ಅಜರ್ ಮೃತಪಟ್ಟ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಧೃಢಪಡಿಸಿದೆ.
ಬುಧವಾರ ಮುಂಜಾನೆ, ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದ 9 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಆದರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಒಂದು, ಈ ವೇಳೆ ಜೈಶ್-ಎ-ಮೊಹಮದ್ ಸಂಘಟನೆಯ ಅಜರ್ ಮಸೂದ್‌ನ ಕುಟುಂಬದ 13 ಜನ ಮೃತಪಟ್ಟಿದ್ದರು. ಇದರಲ್ಲಿ ಅಜರ್ ಮಸೂದ್ ಸಹೋದರ ಅಬ್ದುಲ್ ರೌಫ್ ಕೂಡ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Previous articleಭಾರತದ ʻಸುದರ್ಶನ ಚಕ್ರʼಕ್ಕೆ ಪಾಕ್ ಕ್ಷಿಪಣಿಗಳು ಉಡೀಸ್
Next articleಬಸವ ಸಾಗರ ಜಲಾಶಯಕ್ಕೆ ಭದ್ರತೆ ಹೆಚ್ಚಳ