Home ತಾಜಾ ಸುದ್ದಿ ಕಂದಹಾರ್‌ ವಿಮಾನ ಹೈಜಾಕ್‌ ಮಾಸ್ಟರ್‌ಮೈಂಡ್‌ ಅಬ್ದುಲ್‌ ರೌಫ್‌ ಅಜರ್‌ ಫಿನಿಶ್‌

ಕಂದಹಾರ್‌ ವಿಮಾನ ಹೈಜಾಕ್‌ ಮಾಸ್ಟರ್‌ಮೈಂಡ್‌ ಅಬ್ದುಲ್‌ ರೌಫ್‌ ಅಜರ್‌ ಫಿನಿಶ್‌

0

ಇಸ್ಲಾಮಾಬಾದ್​​: ಭಾರತೀಯ ಸೇನೆ ನಡೆಸಿದ ಆಪರೇಷನ್​ ಸಿಂದೂರ ವೇಳೆ ಪಾಕಿಸ್ತಾನದ ಜೈಷ್​ ಉಗ್ರ ಹಾಗೂ ಐಸಿ 814 ಕಂದಹಾರ್ ವಿಮಾನ ಅಪಹರಣದ ಹಿಂದಿನ ಮಾಸ್ಟರ್ ಮೈಂಡ್ ಅಬ್ದುಲ್ ರೌಫ್ ಅಜರ್ ಮೃತಪಟ್ಟ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಧೃಢಪಡಿಸಿದೆ.
ಬುಧವಾರ ಮುಂಜಾನೆ, ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದ 9 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಆದರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಒಂದು, ಈ ವೇಳೆ ಜೈಶ್-ಎ-ಮೊಹಮದ್ ಸಂಘಟನೆಯ ಅಜರ್ ಮಸೂದ್‌ನ ಕುಟುಂಬದ 13 ಜನ ಮೃತಪಟ್ಟಿದ್ದರು. ಇದರಲ್ಲಿ ಅಜರ್ ಮಸೂದ್ ಸಹೋದರ ಅಬ್ದುಲ್ ರೌಫ್ ಕೂಡ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Exit mobile version