ಸರ್ಕಾರ ನಿಮ್ಮದೇ ಟೀಕಿಸುವುದನ್ನು ಬಿಟ್ಟು ಕ್ರಮಕೈಗೊಳ್ಳಿ

Advertisement

ಬಾಗಲಕೋಟೆ: ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕ್ರಮಕೈಗೊಳ್ಳಲು ಕಾಂಗ್ರೆಸ್ಸಿನವರ ಸರ್ಕಾರವೇ ಆಡಳಿತದಲ್ಲಿರುವುದರಿಂದ ಬಿಜೆಪಿಯನ್ನು ಟೀಕಿಸುತ್ತಾ ಕೂರುವ ಬದಲಾಗಿ ಕ್ರಮಕ್ಕೆ ಮುಂದಾಗುವಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಜಮಖಂಡಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕ್ರಮಕೈಗೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ. ಯಾರಾದರೂ ಅದಕ್ಕೆ ಅಡ್ಡಿಪಡಿಸಿದರೆ ಮಾತನಾಡಬೇಕು. ಯಾರೂ ಅಂಥ ಕೆಲಸಕ್ಕೆ ಮುಂದಾಗಿಲ್ಲ ಹೀಗಾಗಿ ಟೀಕೆ ಮಾಡುತ್ತ ಕೂರುವ ಬದಲಾಗಿ ಕ್ರಮಕೈಗೊಳ್ಳಲಿ ಎಂದರು.
ಈ ವಿಚಾರ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಮುಜುಗರ ಹುಟ್ಟಿಸಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ಘಟನೆಗಳು ಯಾವಾಗಲೇ ಗಮನಕ್ಕೆ ಬಂದರೂ ದಿಟ್ಟ ಕ್ರಮವಾಗಬೇಕು. ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಪಕ್ಷದಿಂದ ಹೊರಗೆ ಹಾಕಲಾಗಿದೆ. ಎಸ್‌ಐಟಿ ತನಿಖೆಗೆ ಜೆಡಿಎಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ನಾಯಕರು ಹೇಳಿದ್ದಾರೆ. ಸಂಪೂರ್ಣ ತನಿಖೆ ಕೈಗೊಂಡು ಕ್ರಮವಾಗಬೇಕೆಂದರು. ಜನ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಪರ ಇರುವ ಅಲೆಯನ್ನು ಕಂಡು ಕಾಂಗ್ರೆಸ್ಸಿನವರು ವಿಚಲಿತರಾಗಿದ್ದಾರೆ. ಇನ್ನೂ ಐದು ವರ್ಷ ಬಿಜೆಪಿಯೇ ದೇಶದಲ್ಲಿ ಆಡಳಿತದಲ್ಲಿ ಇರಲಿದೆ ಎಂದರು.