ಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ

Advertisement

ಚಿಕ್ಕಮಗಳೂರು: ಪಂಡಿತಾರಾಧ್ಯರ ಬಗ್ಗೆ ಅಪಾರವಾದ ಗೌರವಯಿದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ಬಹಳ ದೊಡ್ಡ ಕ್ರಾಂತಿ ಮಾಡಿದ ಮಠ ಅದು. ಅವರು ಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ, ನಿಮಗೆ ಶೋಭೆ ತರಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ದತ್ತಮಾಲಾ ಅಭಿಯಾನ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಆಗಮಿಸಿದ್ದ ವೇಳೆ ಮಾತನಾಡಿ ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಶುಭ ಕಾರ್ಯಗಳ ಅರಂಭಕ್ಕೂ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದರು
ಗಣೇಶನ ಅಪ್ಪ ಶಿವನನ್ನ ಪೂಜೆ ಮಾಡ್ತೀರಾ? ಗಣೇಶ ಬೇಡ್ವಾ ನಿಮ್ಮ ಲಾಜಿಕ್ ಏನು? ವಚನಗಳನ್ನು ಹೇಳಬೇಕು, ಉಳಿಸಬೇಕು ಎಂಬ ಹೇಳಿಕೆಗೆ ನಮ್ಮ ವಿರೋಧವಿಲ್ಲ, ಗಣೇಶನ ಪೂಜೆಗೆ ಏಕೆ ವಿರೋಧ ಮಾಡ್ತೀರಾ ಎಂದು ಪ್ರಶ್ನಿಸಿದರು.
ತಪ್ಪು ಅಂತ ಹೇಳ್ತೀರಾ, ಮೂಢ ನಂಬಿಕೆ ಅಂತ ಏಕೆ ಹೇಳ್ತೀರಾ ಎಂದು ಪ್ರಶ್ನಿಸಿ, ಸಾವಿರಾರು ವರ್ಷಗಳ ನಂಬಿಕೆಯನ್ನು ವಿರೋಧಿಸೋದು ಸಂವಿಧಾನ ವಿರೋಧಿಯಾಗುತ್ತೆ. ಸಾರ್ವಜನಿಕವಾಗಿ ಒಂದು ನಂಬಿಕೆ ಘಾಸಿಗೊಳಿಸೋದು ಗುರುಗಳೇ ನಿಮಗೆ ಶೋಭೆ ತರಲ್ಲ, ನಿಮ್ಮ ಹೇಳಿಕೆ ಹಿಂಪಡೆಯಿರಿ ಎಂದು ಆಗ್ರಹಿಸಿದರು.