ಶಾಸಕ ಬಯ್ಯಾಪುರ ಸೋಲು ಖಚಿತ

ಕುಷ್ಟಗಿ
Advertisement

ಕುಷ್ಟಗಿ: ಕುಷ್ಟಗಿ ವಿಧಾನಸಭೆ ರಾಜಕೀಯ ಇತಿಹಾಸದಲ್ಲಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾದವರು ಸತತ ಎರಡನೇ ಬಾರಿ ಆಯ್ಕೆಯಾಗಿರುವ ಇತಿಹಾಸ ಇಲ್ಲ. ನಾನು ಸತತವಾಗಿ ಸೋಲು ಕಂಡಿದ್ದೇನೆ. ಚುನಾವಣೆಯಲ್ಲಿ ಶಾಸಕ ಬಯ್ಯಾಪುರ ಆಯ್ಕೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ಸೋಲು ಇದೆ ಎನ್ನುವುದನ್ನು ಬಯ್ಯಾಪುರ ತಿಳಿದುಕೊಳ್ಳಬೇಕು ಎಂದು ಬಿಜೆಪಿಯ ಮಾಜಿ ಶಾಸಕ ಕೆ. ಶರಣಪ್ಪ ಹೇಳಿದರು.
ತಾಲೂಕಿನ ಹನಮಸಾಗರ ಗ್ರಾಮದಲ್ಲಿ ನಡೆಸ ಎಸ್.ಟಿ. ಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಶಾಸಕ‌ ಬಯ್ಯಾಪುರ ನಾನು ಇತಿಹಾಸವನ್ನು ಮುರಿಯುತ್ತೇನೆ ಎಂದು ಹೇಳುತ್ತಾರೆ. ಅವರು ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡುತ್ತಿದ್ದಾರೆ. ಇದು ಗುತ್ತೇದಾರರ ಹಿತಕ್ಕೋ ಅಥವಾ ಪ್ರಯಾಣಿಕರ ಹಿತಕ್ಕೋ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದರು.
ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಕುಷ್ಟಗಿ ತಾಲೂಕಿಗೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಮಾಡಿಲ್ಲ. ತಮ್ಮ ಸಂಬಂಧಿಕರಿಗೆ ಮತ್ತು ತಮ್ಮ ಸಮುದಾಯದ ಜನರಿಗೆ ಅನುಕೂಲವಾಗುವ ರೀತಿ ರಾಜಕಾರಣ ಮಾಡುತ್ತಾರೆ ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಮತ ಹಾಕಿ ಮತವನ್ನು ಅಪವಿತ್ರ ಮಾಡಿಕೊಳ್ಳಬೇಡಿ ಎಂದರು.