ಯುಪಿಎಸ್‌ಸಿಯಲ್ಲಿ ಬಳ್ಳಾರಿ ಯುವಕನ ಸಾಧನೆ

Advertisement

ಬಳ್ಳಾರಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಯುವಕ ಶಾಂತಪ್ಪ ಕುರುಬರ ದೇಶಕ್ಕೆ 644ನೇ ರ‍್ಯಾಂಕ್ ಪಡೆದಿದ್ದಾರೆ.
ಕುರುಗೋಡು ತಾಲ್ಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಯುವಕ ಶಾಂತಪ್ಪ ಕುರುಬರ ಅವರು 8ನೇ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಮೊದಲ ಐದು ಪ್ರಯತ್ನಗಳಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿರಲಿಲ್ಲ. 6 ಮತ್ತು 7ನೇ ಪ್ರಯತ್ನದಲ್ಲಿ ಮುಖ್ಯಪರೀಕ್ಷೆ ಮತ್ತು ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಆದರೆ ಆಯ್ಕೆಯಾಗಿರಲಿಲ್ಲ. 8ನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು.