ಮೋದಿ ಗೆದ್ದರೆ ನೆನಪಿಡುವಂತ ಕೆಲಸ ಮಾಡುವೆ

Advertisement

ಜೇವರ್ಗಿ : ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ ಉತ್ತರ ಕರ್ನಾಟಕ ಭಾಗದ ಜನರು ನೆನಪಿಡುವಂತಹ ಕೆಲಸಗಳನ್ನು ಮಾಡಿಸುವ ಜವಾಬ್ದಾರಿ ನನ್ನದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತದಾರರಿಗೆ ಭರವಸೆ ನೀಡಿದರು.

ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜೆಡಿಎಸ್ ಬಿಜೆಪಿ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿ ರಾಜ್ಯದ ಜನರಿಗೆ 52 ಸಾವಿರ ಕೋಟಿ ಹಣದಲ್ಲಿ 5 ಗ್ಯಾರಂಟಿಗಳನ್ನು ಪೂರೈಸುತ್ತಿದ್ದಾರೆ. ಇನ್ನುಳಿದ ಹಣ ಎಲ್ಲಿ ಹೋಯಿತು. ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ 36 ಸಾವಿರ ರೂಪಾಯಿ ಸಾಲವನ್ನು ಹೊರಿಸಿದ್ದಾರೆ. ಇದನ್ನ್ಯಾರು ಕಟ್ಟಬೇಕು. ಈ ಸರ್ಕಾರ ಐದು ವರ್ಷ ಪೂರ್ಣಗೊಳ್ಳುವುದಿಲ್ಲ. ಇದೇ ವರ್ಷ ಚುನಾವಣೆ ಮತ್ತೆ ನಡೆದರು ನಡೆಯಬಹುದು. ಕಲ್ಬುರ್ಗಿಯ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರಿಗೆ ಮತ ನೀಡುವುದರ ಮುಖಾಂತರ ನರೇಂದ್ರ ಮೋದಿ ಅವರನ್ನ ಪ್ರಧಾನಿಯನ್ನಾಗಿ ಮಾಡಬೇಕು ಎಂದರು.

ನಂತರ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ 24586 ಹೆಚ್ಚಿನ ಮತಗಳನ್ನು ಬಿಜೆಪಿಗೆ ನೀಡಿದ್ದೆವು. ಜಿಲ್ಲೆಯಲ್ಲಿ 1,81,000 ಜೆಡಿಎಸ್ ನ ಮತಗಳಿವೆ. ನಮ್ಮ ಕಾರ್ಯಕರ್ತರನ್ನ ಕಡೆಗಣಿಸದಿರಲಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 30,000 ಮತಗಳನ್ನು ಲೀಡ್ ಕೊಡುತ್ತೇವೆ. ತಾಕತ್ತಿದ್ದರೆ ಶಾಸಕ ಡಾ. ಅಜಯ್ ಸಿಂಗ್ 30,000 ಲೀಡು ಕೊಟ್ಟು ನೋಡಲಿ. ಇಲ್ಲದಿದ್ದರೆ ಜೂನ್ ನಾಲ್ಕರಂದು ರಾಜೀನಾಮೆ ನೀಡಲಿ. ಸಂಸದ ಉಮೇಶ್ ಜಾಧವರು ಕಳೆದ ಬಾರಿ ನೀಡಿದ ಕೆಲವು ಆಶ್ವಾಸನೆಗಳನ್ನು ಈ ಬಾರಿಯಾದರೂ ಈಡೇರಿಸಲಿ ಎಂದರು.

ಈ ಸಂದರ್ಭದಲ್ಲಿ ಬಂಡೆಪ್ಪ ಕಾಶಾಪುರ್ˌ ಬಾಲಚಂದ್ರ ಗುತ್ತೇದಾರ್ˌ ಶರಣ್ ಗೌಡ ಕಂದಕೂರˌ ಧರ್ಮಣ್ಣ ದೊಡ್ಮನಿˌ ಶಶಿಲ ನಮೋಶಿˌ ಶಿವರಾಜ್ ಪಾಟೀಲ್ ರದ್ದೇವಾಡಗಿˌ ರಮೇಶ್ ಬಾಬು ವಕೀಲˌ ಹಳ್ಳೆಪಾಚಾರ್ಯ ಜೋಶಿˌ ದಂಡಪ್ಪ ಸಾಹು ಕುಳಗೇರಿˌ ಮಹೇಶ್ವರಿ ವಾಲಿˌಕೃಷ್ಣಾರೆಡ್ಡಿˌ ಗೋಲ್ಲಾಳಪ್ಪ ಕಡಿˌ ರೌಫ್ ಹವಾಲ್ದಾರ್ˌ ಮರಪ್ಪ ಬಡಿಗೇರ್ˌ ರವಿಕುಮಾರ್ ವಕೀಲ ಶಿವಕುಮಾರ್ ನಾಟೇಕರ್ˌ ಮಹೇಶ್ ಪಾಟೀಲ್ ಕೂಡಿˌ ಸಾಯ್ಬಣ್ಣ ದೊಡ್ಮನಿˌ ಎಸ್. ಎಸ್ ಸಲಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು