ಮೂವರು ಸಾಧಕರಿಗೆ ನಾಡೋಜ

Advertisement

ಹೊಸಪೇಟೆ :ಡಾ.ಬಸವಲಿಂಗ ಪಟ್ಟದೇವರು, ಡಾ.ತೇಜಸ್ವಿ ಕಟ್ಟಿಮನಿ ಹಾಗೂ ಡಾ.ಎಸ್.ಸಿ.ಶರ್ಮಾ 37ನೇ ಘಟಿಕೋತ್ಸವದಲ್ಲಿ ನಾಡೋಜ ಪದವಿಗೆ ಭಾಜನರಾಗಿದ್ದಾರೆ ಹಾಗೂ 264 ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿಯನ್ನು ಪಡೆಯಲಿದ್ದಾರೆ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ಧಿಗೋಷ್ಠಯಲ್ಲಿ ಮಾಹಿತಿ ನೀಡಿದ ಅವರ ಸಮಾಜಸೇವೆಗೆ ಕನ್ನಡ ಸ್ವಾಮಿಜೀ ಎಂದೆ ಖ್ಯಾತವಾದ ಭಾಲ್ಕಿ ವಿರಕ್ತಮಠದ ಡಾ.ಬಸವಲಿಂಗ ಪಟ್ಟದೇವರು, ಆಂದ್ರಪ್ರದೇಶದ ಬುಡಕಟ್ಟು ವಿಶ್ವ ವಿದ್ಯಾಲಯದ ಡಾ.ತೇಜಸ್ವಿ ಕಟ್ಟಿಮನಿ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನ್ಯಾನೊ ಕ್ಷೇತ್ರದಲ್ಲಿ ಸಾಧನೆ ಮಾಡಿದ ನ್ಯಾನೋ ನಿವೃತ್ತ ನಿರ್ದೇಶಕ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನಾಡೋಜ ಗೌರವಕ್ಕೆ ಭಾಜನರಾಗಿದ್ದಾರೆ.
ಭಾಷಾ ನಿಕಾಯದಲ್ಲಿ 100ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ನಿಕಾಯದಲ್ಲಿ 160 ವಿದ್ಯಾರ್ಥಿಗಳು ಹಾಗೂ ಲಲಿತಕಲೆಗಳ ನಿಕಾಯದಲ್ಲಿ 4 ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿಗೆ ಅರ್ಹರಾಗಿದ್ದಾರೆ
ಜನೆವರಿ 10ರಂದು ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರಧಾನ ಮಾಡಲಿದ್ದಾರೆ.ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಟಿ.ಲಿಟ್ ಹಾಗೂ ಪಿ.ಎಚ್.ಡಿ ಪ್ರಧಾನ ಮಾಡಲಿದ್ದಾರೆ. ಆಂದ್ರಪ್ರದೇಶದ ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಎಸ್.ಎ. ಕೋರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಕುಲಸಚಿವ ಡಾ.ವಿಜಯಪೂಣಚ್ಚ, ಡೀನರುಗಳಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಚಲುವರಾಜ, ಡಾ.ಶಿವಾನಂದ ವಿರಕ್ತಮಠ, ಡಾ.ಶೈಲಜಾ ಹಿರೇಮಠ, ಡಾ.ದಿನೇಶ್, ಡಾ.ಪಿ.ಮಹಾದೇವಪ್ಪ ಸೇರಿದಂತೆ ಇತರರು ಹಾಜರಿದ್ದರು.