ಮಕ್ಕಳ ಬಗ್ಗೆ ಉದಾಸೀನತೆ ಬೇಡ

Advertisement

ಗೃಹಸ್ಥನಾದವನು ಉತ್ತಮ ಮಕ್ಕಳನ್ನು ಪಡೆಯಬೇಕು. ಆಗಷ್ಟೇ ಪಿತೃಋಣವು ಪರಿಹಾರವಾಗುತ್ತದೆ. ಗಂಡು ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ನೌಕರಿಯನ್ನು ಸಂಧಿಸಿಕೊಟ್ಟು ಅವರ ಜವಾಬ್ದಾರಿಯನ್ನು ಪೂರ್ಣವಾಗಿ ನಿರ್ವಹಿಸಬೇಕು. ಹೆಣ್ಣುಮಕ್ಕಳಿಗೂ ಕೂಡ ಎಲ್ಲ ಬಗೆಯಿಂದಲೂ ಉತ್ತಮವಾದ ಗುಣವನ್ನು ಹೊಂದಿರುವ ವರನಿಗೆ ವಿವಾಹ ರಕ್ಷಣೆ ಮಾಡಿ, ಮಾಡಿಕೊಟ್ಟು ತಮ್ಮ ಜವಾಬ್ದಾರಿಯನ್ನು ಪೂರೈಸಬೇಕು. ವೃದ್ಧಾಪ್ಯದಲ್ಲಿ, ಪುನಃ ಸಂಸಾರದಲ್ಲಿ ಐಹಿಕ ವಿಷಯಗಳಲ್ಲಿ ಪ್ರವೇಶಿಸಿದೆ ಪರಮಾತ್ಮನಲ್ಲಿ ನಿರತನಾಗಿ ಋಷಿಯಂತೆ ಜೀವನ ಸಾಗಿಸಬೇಕು.
ಸತ್ಯ ಧರ್ಮಗಳಿದ್ದರೆ ನಿನಗೆ ಜಯ ಕಟ್ಟಿಟ್ಟಬುತ್ತಿ: ಸಮಸ್ತ ಜಗತ್ತಿನ ಸಾಮರ್ಥ್ಯವನ್ನು ಕೃಷ್ಣ್ಣ ಪರಮಾತ್ಮನು ಮೀರಿದ್ದಾನೆ. ಸಮಸ್ತ ಜಗತ್ತು ಕೃಷ್ಣ್ಣನ ಅಧೀನವಾಗಿದೆ. ಸತ್ಯ, ಧರ್ಮ, ಅಧರ್ಮದ ಬಗ್ಗೆ ಹಿಂಜರಿಕೆ, ಋಜುಸ್ವಭಾವ ಇಂಥ ಗುಣಗಳು ಎಲ್ಲಿದೆಯೋ, ಅಲ್ಲಿ ಸಮಸ್ತ ವೇದ ಪ್ರತಿಪಾದ್ಯವಾದ ಶ್ರೀಕೃಷ್ಣನಿದ್ದಾನೆ.
ಎಲ್ಲಿ ಶ್ರೀಕೃಷ್ಣ್ಣನಿರುವನೋ, ಅಲ್ಲಿ ಜಯವೂ ಕೂಡ ಇರುತ್ತದೆ. ಆದ್ದರಿಂದ ಸತ್ಯ, ಧರ್ಮ ಮೊದಲಾದವುಗಳಲ್ಲಿ ನಿರತನಾದರೆ ನಾನು ಸೋಲುತ್ತೇನೆಂಬ ಸಂಶಯ ಯಾರಿಗೂ ಬೇಡ.
ಅತಿಥಿಯನ್ನು ಸತ್ಕರಿಸು: ಮನೆಗೆ ಬಂದ ಅತಿಥಿಗೆ ಎಲ್ಲ ರೀತಿಯಲ್ಲಿಯೂ ಉಪಚಾರ ಮಾಡಬೇಕು. ವ್ಯಾವಹಾರಿಕವಾಗಿ ಉಪಚಾರ ಮಾಡುವುದು ತಪ್ಪಾಗುತ್ತದೆ. ಅತಿಥಿಯು ಆಗಮಿಸಿದಾಗ ಎದ್ದು ನಿಲ್ಲಬೇಕು. ಅವನೆಡೆಗೆ ಸಾಗಿ ಶಾಸ್ತ್ರೋಕ್ತ ರೀತಿಯಲ್ಲಿ ಕೈಕಾಲುಗಳನ್ನು ತೊಳೆದು ಪೂಜಿಸಬೇಕು. ದೃಷ್ಟಿಯನ್ನು, ಮನಸ್ಸನ್ನು, ಒಳ್ಳೆಯ ಮಾತುಗಳನ್ನು ಅವನಲ್ಲೇ ಕೇಂದ್ರೀಕರಿಸಬೇಕು. ಇದುವೇ ಅತಿಥಿ ಸತ್ಕಾರವಾಗಿದೆ.