ಪ್ರಜ್ವಲ್ ಪ್ರಕರಣ ಗೊತ್ತಿದ್ದು ಮೈತ್ರಿ ಟಿಕೆಟ್ ಕೊಟ್ಟಿದ್ದಾರೆ

Advertisement

ಬೆಳಗಾವಿ: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ವಿಚಾರ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರಜ್ವಲ್ ರೇವಣ್ಣಗೆ ಮೈತ್ರಿ ಅಭ್ಯರ್ಥಿ ಎಂದು ಟಿಕೆಟ್ ಕೊಟ್ಟಿದ್ದಾರೆ. ಪ್ರಜ್ವಲ್ ಪರವಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿಯನ್ನ ಜೆಡಿಎಸ್‌ನವರು ಈ ಮೊದಲು ಕಮ್ಯುನಲ್ ಪಾರ್ಟಿ ಎಂದು ಹೇಳುತ್ತಿದ್ದರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಸೇರಲ್ಲ ಎನ್ನುತ್ತಿದ್ದರು. ಮೋದಿ ಪ್ರಧಾನಿ ಆಗಲ್ಲ, ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಗೌಡರು ಹೇಳುತ್ತಿದ್ದರು. ಮೋದಿ ಪ್ರಧಾನಿ ಆದ ಬಳಿಕ ದೇವೆಗೌಡರು ದೇಶ ಬಿಟ್ಟು ಹೋದರೆ ಎಂದು ಸಿಎಂ ಪ್ರಶ್ನಿಸಿದರು. ವಿಡಿಯೋ ನಾಲ್ಕೈದು ವರ್ಷಗಳ ಹಿಂದಿನದು ಎಂದು ಸಿಟಿ ರವಿ ಹೇಳಿರಬಹುದು. ಆದರೆ ಆಗ ಯಾವ ಸಂತ್ರಸ್ತೆ ಕಂಪ್ಲಿಟ್ ಕೊಟ್ಟಿರಲಿಲ್ಲ, ಈಗ ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣನಿಗೆ ಸೇರಿದ ಅಶ್ಲೀಲ ವಿಡಿಯೋಗಳಿವೆ ಸಂಗತಿ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರು. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.