ನೇಹಾ ಪ್ರಕರಣ ಸಿಬಿಐಗೆ ಕೊಟ್ಟರೆ ಅಪರಾಧಿಗೆ ಉಲ್ಟಾ ನೇತು ಹಾಕುತ್ತೇವೆ

Advertisement

ಹುಕ್ಕೇರಿ(ಬೆಳಗಾವಿ): ನೇಹಾ ಹತ್ಯೆ ಪ್ರಕರಣ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಶಾ, ನೇಹಾ ಹಿರೇಮಠ ಕೇಸ್ ವೈಯಕ್ತಿಕ ವಿಚಾರ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಇದು ವೈಯಕ್ತಿಕ ಅಲ್ಲ ಮತಾಂತರ ಆಗಲು ನೇಹಾ ಒಪ್ಪದಿದ್ದಕ್ಕೆ ಹತ್ಯೆಯಾಗಿದೆ. ಈ ಪ್ರಕರಣಕ್ಕೆ ಸರಿಯಾಗಿ ನ್ಯಾಯ ಸಿಗಬೇಕು ಅಂದರೆ ಪ್ರಕರಣ ಸಿಬಿಐಗೆ ವಹಿಸಬೇಕು. ಆಗ ಅನ್ಯಾಯ ಮಾಡಿದವರಿಗೆ ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಕೇಂದ್ರದ ಗೃಹ ಸಚಿವ ಅಮಿತ ಶಾ ಹೇಳಿದರು.
ಹುಕ್ಕೇರಿಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ೧೦ ಸಾವಿರ ಹಣವನ್ನು ರೈತರಿಗೆ ಕೊಡ್ತಿದ್ದೆವು. ಆದರೆ ಅದನ್ನ ಈ ಸರ್ಕಾರ ಬಂದ್ ಮಾಡಿದೆ. ರೈತರ ಪರವಾಗಿ ಇದ್ದೇವೆ ಅನ್ನೋ ಈ ಸರ್ಕಾರ ಯಾಕೆ ರೈತರ ನಾಲ್ಕು ಸಾವಿರ ಬಂದ್ ಮಾಡಿತು. ಯಾಕೆ ಬಂದ ಮಾಡಿದರು ಎಂಬುದಕ್ಕೆ ಸಿಎಂ ಉತ್ತರ ಕೊಡಬೇಕು ಎಂದು ಶಾ ಹೇಳಿದರು.
ಉರಿ ಮತ್ತು ಫುಲ್ವಾಮಾದಲ್ಲಿ ಘಟನೆ ನಡೆದಾಗ ಭಾರತದಲ್ಲಿ ಮನಮೋಹನ್ ಸಿಂಗ್ ಅಧಿಕಾರ ಇರಲಿಲ್ಲ. ಬದಲಾಗಿ ಮೋದಿ ಸರ್ಕಾರ ಇತ್ತು. ಹೀಗಾಗಿ ಪಾಕಿಸ್ತಾನದ ಒಳಹೊಕ್ಕು ಸರ್ಜಿಕಲ್ ಸ್ಟ್ರೇಕ್ ಮಾಡಲಾಯ್ತು. ಹತ್ತು ವರ್ಷದಲ್ಲಿ ಆರ್ಥಿಕ ಸ್ಥಿತಿ ೧೧ನೇ ಸ್ಥಾನದಿಂದ ೫ನೇ ಸ್ಥಾನಕ್ಕೇರಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾದ್ರೇ ದೇಶದ ಆರ್ಥಿಕ ಸ್ಥಿತಿಯಲ್ಲೂ ಭಾರತ ಮೂರನೇ
ಸ್ಥಾನಕ್ಕೇರಲಿದೆ ಎಂದು ಆಶಯ ವ್ಯಕ್ತಪಡಿಸಿದರು.