ನನ್ನ ಬೆಂಬಲ ಇದೆ ಎಂದು ಸುಳ್ಳು ಹೇಳಿ ಜನರ ಬಳಿ ಮತ ಕೇಳುತ್ತಿದ್ದಾರೆ

Advertisement

ಬಿಜೆಪಿ ಅಭ್ಯರ್ಥಿ ರಾಜೂಗೌಡ ನನ್ನ ಬೆಂಬಲ ಇದೆ ಎಂದು ಸುಳ್ಳು ಹೇಳಿ ಜನರ ಬಳಿ ಮತ ಕೇಳುತ್ತಿದ್ದಾರೆ ಎನ್ನುವ ಸಂಗತಿ ನನ್ನ ಕಿವಿಗೆ ಬಿದ್ದಿದೆ. ಇದು ಅಪ್ಪಟ ಸುಳ್ಳು.

ಬೆಂಗಳೂರು: ಇನ್ನೂ ಎಷ್ಟು ವರ್ಷ ಬಿಜೆಪಿಯ ಸುಳ್ಳುಗಳಿಗೆ ಮೋಸ ಹೋಗ್ತೀರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುರಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು. ಸುರಪುರ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿ ಅಭ್ಯರ್ಥಿ ರಾಜೂಗೌಡ ನನ್ನ ಬೆಂಬಲ ಇದೆ ಎಂದು ಸುಳ್ಳು ಹೇಳಿ ಜನರ ಬಳಿ ಮತ ಕೇಳುತ್ತಿದ್ದಾರೆ ಎನ್ನುವ ಸಂಗತಿ ನನ್ನ ಕಿವಿಗೆ ಬಿದ್ದಿದೆ. ಇದು ಅಪ್ಪಟ ಸುಳ್ಳು. ನರೇಂದ್ರ ಮೋದಿ ಇಂದ ಹಿಡಿದು ಅಮಿತ್ ಶಾ ಮತ್ತು ರಾಜೂಗೌಡನವರೆಗೂ ಎಲ್ಲರೂ ಸುಳ್ಳುಗಳ ಸರದಾರರು. ಮನುಷ್ಯರು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಸುಳ್ಳುಗಳನ್ನು ಇವರು ನೀರು ಕುಡಿದಷ್ಟೆ ಸಲೀಸಾಗಿ ಹೇಳುತ್ತಾರೆ. ಇವರ ಸುಳ್ಳುಗಳನ್ನು ನಂಬಿ ಹತ್ತತ್ತು ವರ್ಷ ಮೋಸ ಹೋಗಿದ್ದು ಸಾಕು. ಇನ್ನೂ ಎಷ್ಟು ವರ್ಷ ಬಿಜೆಪಿಯ ಸುಳ್ಳುಗಳಿಗೆ ಮೋಸ ಹೋಗ್ತೀರಿ? ಮೊದಲ ಮತ್ತು ಎರಡನೆ ಹಂತದ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ನರೇಂದ್ರ ಮೋದಿ ಅವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಬಿಜೆಪಿ ಅವರೇ ಮಾಡಿಸಿರುವ ಸಮೀಕ್ಷೆಯಲ್ಲೇ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಂದಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ 200 ಸೀಟು ಗೆದ್ದರೆ ಹೆಚ್ಚು ಎನ್ನುವಂತಹ ಸ್ಥಿತಿ ಇದೆ. ಹೀಗಾಗಿ ಸೋಲಿಗೆ ಹೆದರಿ ಮೋದಿ, ಅಮಿತ್ ಶಾ, ರಾಜುಗೌಡ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಈ ಸುಳ್ಳುಗಳಿಗೆ ಮರುಳಾಗಬೇಡಿ. ರಾಯಚೂರು ಲೋಕಸಭೆ ಮತ್ತು ಸುರಪುರ ವಿಧಾನಸಭೆ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎನ್ನುವುದು ನನ್ನ ಗುರಿ. ನನ್ನ ಗುರಿಯನ್ನು ನೀವೆಲ್ಲಾ ನಿಮ್ಮ ಗುರಿಯಾಗಿ ತೆಗೆದುಕೊಂಡು, ನನ್ನ ಕೈಗಳಿಗೆ ಬಲತುಂಬಿ ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದಿದ್ದಾರೆ.