ಜಿಲ್ಲೆಗೆ ಬೇರೆಯವರನ್ನು ತರುವುದನ್ನು ನಿಲ್ಲಿಸಿ…

Advertisement

ತುಮಕೂರು: ತುಮಕೂರು ಜಿಲ್ಲೆಗೆ ಬೇರೆಯವರನ್ನು ತರುವುದನ್ನು ನಿಲ್ಲಿಸಿ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಂಪಿಗೆ ನಿಂತು ಹೋದವರು ಯಾರಾದ್ರೂ ನಮ್ಮ ಹೋರಾಟಕ್ಕೆ ಬರುತ್ತಿದ್ದಾರಾ? ಏನಾದ್ರೂ ಆಗುತ್ತಾ? ಯಾರನ್ನು ನಂಬಿ ನಾವು ಹಿಂದೆ ಹೋಗಬೇಕು. ನಾಳೆ ಏನಾಗ್ತಾರೆ ನಮಗೆ ಗೊತ್ತಾ. ಸೋಲ್ತಿವೋ ಗೆಲ್ತಿವೋ ಸ್ಥಳೀಯವಾಗಿ ನಾವು ನಾಯಕತ್ವ ಬೆಳೆಸಿಕೊಂಡರೇ ಕಷ್ಟಕ್ಕೆ-ಸುಖಕ್ಕೆ ಆಗ್ತಾರೆ. ಯಾರು ಬರುತ್ತಾರೋ ಏನೋ ಅವರು ಎಷ್ಟೇ ದೊಡ್ಡವರು ಇದ್ದರೂ ನನಗೆ ಮಾನಸಿಕವಾಗಿ ಅದು ಸಹಿಸುವ ಶಕ್ತಿ ಅಲ್ಲ. ಸೋಮಣ್ಣ ಅಂತಾ ಹೇಳ್ತಿಲ್ಲ. ಈ ಹಿಂದೆ ದೇವೆಗೌಡರು ಬಂದಾಗಲೂ ಪೋನ್ ಮಾಡಿ ಹೇಳಿದ್ದೆ. ಯಾಕೆ ಸರ್ ಬರುತ್ತಿರಾ ಇದಕ್ಕೆ ಕೈ ಹಾಕ್ತಿರಾ ಅಂತಾ ಹೇಳಿದ್ದೇ ಚುನಾವಣೆಗೆ ನಿಂತಾಗ ಅವರು ಮಾತಾಡ್ತಾರೆ ನಾವು ಮಾತಾಡ್ತೀವಿ. ವೈಯಕ್ತಿಕವಾಗಿ ನಮಗೆ ದ್ವೇಷ ಇಲ್ಲಾ. ಕೃಷ್ಣಪ್ಪ, ಕೊದಂಡರಾಮಯ್ಯ, ದೇವೇಗೌಡರು ನಿಂತಾಗ ನಾವು ಬೆಂಬಲ ನೀಡಿಲ್ಲ. ಜಿಲ್ಲೆಯ ಜನರು ಕೂಡ ಕೈ ಹಿಡಿದಿಲ್ಲ. ಈಗ ನಮ್ಮ ಪಕ್ಷದವರು ನಮ್ಮ ಜಾತಿಯವರು ಬರುತ್ತಾರೆ ಅಂತಾ ಮಾತಾಡಿದ್ರೆ ಯಾರಾದರೂ ಸಹಿಸುತ್ತಾರಾ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.
ಇನ್ನೊಬ್ಬರ ಹತ್ತಿರ ಹೋಗಿ ನಾನು ಕೈ ಚಾಚಲ್ಲ: ನಾನು ವಿಘ್ನೇಶ್ವರ ಇದ್ದಂತೆ, ಸೋಮಣ್ಣ ಸುಬ್ರಹ್ಮಣ್ಯ ಇದ್ದಂತೆ. ಪ್ರಪಂಚ ಪರ್ಯಟನೆ ಮಾಡಿಕೊಂಡು ಬಾ ಅಂತಾದ್ರೆ ಗಣೇಶ ಅವರ ಅಪ್ಪ ಅಮ್ಮನ ಸುತ್ತಿ ನಿಂತುಕೊಳ್ತಾನೆ. ಸುಬ್ರಹ್ಮಣ್ಯ ಹೋದವನು ಬರಲೇ ಇಲ್ಲ, ನಾನು ಯಾವ ಗುಂಪಿನಲ್ಲಿದ್ದರೂ ಅಲ್ಲಿರುವ ಲೀಡರ್‌ಗಳನ್ನು ನಂಬಿಕೊಂಡು ರಾಜಕೀಯ ಮಾಡಿರುವ ಮನುಷ್ಯ. ಹೆಗಡೆಯವರು ಇದ್ದಾಗ, ಪಟೇಲರು ಇದ್ದಾಗ ಅವರನ್ನು ನಂಬಿದ್ದೆ. ಈಗ ಯಡಿಯೂರಪ್ಪ ಜೊತೆ ಇದ್ದೇವೆ ಅವರನ್ನ ನಂಬಿದ್ದೇವೆ. ಟಿಕೆಟ್‌ ಕೊಟ್ಟರೆ ಅವರ ದೊಡ್ಡತನ, ಕೊಡದೆ ಇದ್ದರೇ ನಮ್ಮ ಹಣೆ ಬರಹ ಅಂದುಕೊಂಡಿದ್ದೇವೆ. ಇನ್ನೊಬ್ಬರ ಹತ್ತಿರ ಹೋಗಿ ನಾನು ಕೈ ಚಾಚಲ್ಲ ಎಂದು ಹೇಳಿದರು.