ಜಯ ಸಿಗುವವರೆಗೆ ಮಾಲೆ ಹಾಕಲ್ಲ

Advertisement

ನಾನು ಮಠದಲ್ಲಿ ಇದ್ರು ಅಷ್ಟೇ, ಬಯಲಿನಲ್ಲಿ ಇದ್ದರು ಅಷ್ಟೇ ಎಂದು ತಿಳಿದು ಈ ಹೋರಾಟ ಮಾಡುತ್ತಿದ್ದೆನೆ ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕುಬಾರದು ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ವಿರುದ್ಧ ಹೋರಾಟವನ್ನ ಈಗ ಆರಂಭ ಮಾಡಿದ್ದೇನೆ ನ್ಯಾಯ ಸಿಗುವವರೆಗೂ ನಾನು ಕೊರಳಲ್ಲಿ ಮಾಲೆ‌ ಹಾಕುವುದಿಲ್ಲ ನನ್ನ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾನಿರುವ ವೇದಿಕೆಯಲ್ಲಿ ಮಾಲೆ ಹಾಕಲು ಬೀಡುವದಿಲ್ಲ ಗುರಿ ಮುಟ್ಟುವವರೆಗೂ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ ಎಂದು ಭಕ್ತರಿಗೆ ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿಕೊಂಡರು.

ಧಾರವಾಡದ ಸೇವಾಲಯದಲ್ಲಿ ನಡೆದ ಭಕ್ತರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಈಗಾಗಲೇ ನಮ್ಮ ನಿಲುವು ಕೇಂದ್ರದವರೆಗೂ ಮುಟ್ಟಿದೆ. ನನ್ನ ಹೋರಾಟ ಈಗಿನಿಂದ ಆರಂಭವಾಗಿಲ್ಲ, ಮೊದಲನೆಯ ಹೋರಾಟ ಐದು ವರ್ಷ ಮುಗುವಿದ್ದಾಗ ಮೊದಲು ತಾಯಿಯೊಂದಿಗೆ ಹೋರಾಟ ಮಾಡಿದವನು ನಾನು, ಹತ್ತು ವರ್ಷದವನು ಇದ್ದಾಗ ಹೋರಾಟ ಮಾಡಿ ಮನೆ ಬಿಟ್ಟು, ಸನ್ಯಾಸಿ ಆದವನು, ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನು ನಾನಲ್ಲ ವೀರಶೈವ ಲಿಂಗಾಯತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವನು ನಾನು ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆ ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದೆ ಹಿಂದಿನ ಸರ್ಕಾರದಲ್ಲಿ 40% ಕಮಿಷನ್ ವಿರುದ್ಧ ಹೋರಾಟ ಮಾಡಿದ್ದೆ ಎಂದರು.

ಹೋರಾಟಕ್ಕೆ ಜ‌ಯ ಸಿಕ್ಕ ಮೇಲೆ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು. ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದ್ದಲ್ಲ ನಮ್ಮ ಮಠ ಜಾತ್ಯಾತೀತ ಮಠ ಜೋಶಿಯವರನ್ನ ನಮ್ಮ ಸಮಾಜದದವರು ಗೆಲ್ಲಿಸಿದ್ರು ಗೆಲ್ಲಿಸಿದವರನ್ನೇ ಜೋಶಿಯವರು ಮರೆತರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನರಿಗೆ ಟಿಕೆಟ್ ಆಮಿಷ ತೋರಿಸಿದ್ರು ಡಾ.ಮಹೇಶ ನಾಲವಾಡ ಅವರನ್ನ ಬಳಕೆ ಮಾಡಿಕೊಂಡು ಬೀಸಾಕಿದ್ದಾರೆ. ಅಂಗಡಿ, ಕಾಂತೇಶ ಅವರನ್ನ ಸಹ ಜೋಶಿಯವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರ ಮಾಡಲು ಕಳಿಸಿದ್ರು ಈಶ್ವರಪ್ಪನವರಿಗೂ ಮೋಸ ಮಾಡಿದವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಂದು ಹರಿಹಾಯ್ದರು.

ಸದಾಕಾಲವೂ ಮೋದಿ ಪಕ್ಕ ಇರುವ ಜೋಶಿ ನಮ್ಮ ನಾಡಿಗಾಗಿ ಏನೂ ಮಾಡಿದ್ರು ಸಣ್ಣಪುಟ್ಟ ಕೆಲಸಕ್ಕಾಗಿ ನಾನು ವಿದ್ಯಾರ್ಥಿಗಳನ್ನ ಜೋಶಿ ಹತ್ತಿರ ಕಳಿಸಿದ್ರೆ, ಅವರ ಕೆಲಸ ಮಾಡಿಲ್ಲ ಇವರ ಸಂಸದರಾಗಿದ್ದು ಜನರ ಕೆಲಸ ಮಾಡಲಿಕ್ಕೆ ಜೋಶಿ ಪ್ರಧಾನ ಮಂತ್ರಿ ಪಕ್ಕ ಇದ್ದಾಗ ನಮ್ಮ ನಾಡಿಗೆ ಏನಾದ್ರೂ ತಂದು ಹಾಕ್ತಾರೆಂದು ಕಾಯ್ದು ನೋಡಿದ್ವಿ ಆದ್ರೆ ಜೋಶಿ ಏನೂ ತಂದು ಹಾಕಲಿಲ್ಲ, ಎಲ್ಲವನ್ನೂ ತಿಂದು ಹಾಕಿದ್ದಾರೆ. ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕೆಂದು ಜೋಶಿ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಾರೆ ಮತ್ತು ಮಾತನಾಡುತ್ತಾರೆ. ನಿಮ್ಮ ಕಾರ್ಯಕ್ರಮ ವೇದಿಕೆ ಹಂಚಿಕೆಕೊಂಡು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಸ್ವಾಮೀಜಿಗಳು ಬೇಕಾಗಿತ್ತಾ..? ನಾನು ಮಠದಲ್ಲಿ ಇದ್ರು ಅಷ್ಟೇ, ಬಯಲಿನಲ್ಲಿ ಇದ್ದರು ಅಷ್ಟೇ ಎಂದು ತಿಳಿದು ಈ ಹೋರಾಟ ಮಾಡುತ್ತಿದ್ದೆನೆ ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕುಬಾರದು ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು ಎಂದು ಕರೆ ನೀಡಿದರು.