ಖೊಟ್ಟಿ ಮತದಾನಕ್ಕೆ ಮುಂದಾದ ಯುವಕ ಪೊಲೀಸ್ ವಶಕ್ಕೆ

Advertisement

ಬಾಗಲಕೋಟೆ: ಯುವಕನೋರ್ವ ಖೊಟ್ಟಿ ಮತದಾನಕ್ಕೆ ಮುಂದಾಗಿದ್ದಾನೆ ಆತನಿಗೆ ಚುನಾವಣಾ ಸಿಬ್ಬಂಧಿ ಅವಕಾಶಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಲಾದಗಿಯ ೧೯೫ ನೇಯ ಮತಗಟ್ಟೆಯಲ್ಲಿ ಸಂಜೆ ೫.೩೦ ರ ಸುಮಾರಿಗೆ ಸಂಭವಿಸಿದ್ದು ಸದ್ಯ ಮತಗಟ್ಟೆ ಬಳಿ ಬಿಜೆಪಿ ಮುಖಂಡರು,ಕಾರ್ಯಕರ್ತರು ಜಮಾಯಿಸಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಖೊಟ್ಟಿ ಮತದಾನಕ್ಕೆ ಮುಂದಾಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು,ಈ ಯುವಕನಿಗೂ ಮೊದಲು ಇದೇ ರೀತಿ ಇಬ್ಬರು ಯುವಕರು ಖೊಟ್ಟಿ ಮತದಾನ ಮಾಡಿದ್ದು ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು  ಬಿಜೆಪಿ ಮುಖಂಡರು,ಕಾರ್ಯಕರ್ತರು ಆರೊಪಿಸುತ್ತಿದ್ದು ಸದ್ಯ ಮತಗಟ್ಟೆ ಬಳಿ ಪರಿಸ್ಥಿತಿ ಗೊಂದಲವಾಗಿದೆ