ಒಂದು ಮತದ ಮಹಿಮೆ ಅಪಾರ

Advertisement

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ. ನನ್ನ ಒಂದು ಮತದಿಂದ ಏನಾದೀತು ಎನ್ನುವ ಉದಾಸೀನತೆ (ನಿರ್ಲಕ್ಷ್ಯ) ಮಾಡುವವರಿಗೆ ಒಂದು ಓಟಿನ ಮಹಿಮೆ ಏನು ಎನ್ನುವುದಕ್ಕೆ ಕೆಲವು ಪ್ರಮುಖ ಘಟನೆಗಳನ್ನು ಉಲ್ಲೇಖಿಸಲಾಗಿದೆ. ಇದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಒಂದು ಮತದ ಮಹಿಮೆ ತನ್ನ ಪವಾಡ ಪ್ರದರ್ಶಿಸಿದೆ.
೨೦೦೮ರಲ್ಲಿ, ಸಿ.ಪಿ ಜೋಶಿ ಅವರು ರಾಜಸ್ಥಾನದ ನಾಥದ್ವಾರ ಕ್ಷೇತ್ರದಿಂದ ಕೇವಲ ಒಂದು ಮತದಿಂದ ಸೋತರು, ಅವರ ಚಾಲಕನಿಗೆ ಮತದಾನ ಮಾಡಲು ಸಮಯ ಸಿಗಲಿಲ್ಲ. ೨೦೧೩ರಲ್ಲಿ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ(೪೦,೭೫೧) ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ(೪೦,೭೫೨) ಕೇವಲ ಒಂದು ಮತದಿಂದ ಸೋಲಿಸಿದ್ದರು. ಇಲ್ಲಿಯೂ ಅವರ ಕುಟುಂಬದ ಒಬ್ಬ ಸದಸ್ಯರು ಮತ ಹಾಕಿರಲಿಲ್ಲ.
೧೭೭೬ರಲ್ಲಿ ಅಮೆರಿಕದಲ್ಲಿ ಒಂದು ಮತವನ್ನು ಹೆಚ್ಚು ಪಡೆಯುವ ಮೂಲಕ ಜರ್ಮನ್ ಭಾಷೆಯ ಬದಲಿಗೆ ಇಂಗ್ಲಿಷ್ ಅಧಿಕೃತ ಭಾಷೆಯಾಯಿತು.
೧೯೯೮ ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕೇವಲ ಒಂದು ಮತದಿಂದ ಪತನವಾಯಿತು. ೧೯೧೭ರಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕೇವಲ ಒಂದು ಮತದಿಂದ ಸೋತರು.
೧೯೨೩ರಲ್ಲಿ, ಒಂದು ಹೆಚ್ಚಿನ ಮತವನ್ನು ಪಡೆಯುವ ಮೂಲಕ, ಹಿಟ್ಲರ್ ನಾಜಿ ಪಕ್ಷದ ಮುಖ್ಯಸ್ಥನಾಗುವುದರೊಂದಿಗೆ ಮತ್ತು ಹಿಟ್ಲರ್ ಯುಗವು ಪ್ರಾರಂಭವಾಯಿತು. ೧೮೭೫ ರಲ್ಲಿ, ರಾಜಪ್ರಭುತ್ವವನ್ನು ಫ್ರಾನ್ಸ್ನಲ್ಲಿ ಕೇವಲ ಒಂದು ಮತದೊಂದಿಗೆ ಗಣರಾಜ್ಯದಿಂದ ಬದಲಾಯಿಸಲಾಯಿತು.
ಹೀಗೆ ಹತ್ತು ಹಲವು ಒಂದು ಮತದಿಂದ ಮಹತ್ವದ ನಿರ್ಧಾರವಾಗಿರುವ ನಿದರ್ಶನಗಳಿವೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಅಮೂಲ್ಯವಾದ ಮತವನ್ನು ಪ್ರಜಾಪ್ರಭುತ್ವ ವ್ಯವಸ್ಥೆ
ಬಲಗೊಳಿಸಲು ಚಲಾಯಿಸಬೇಕಿದೆ. ಅದು ಸಂವಿಧಾನದಬದ್ಧ ಹಕ್ಕು ಎನ್ನುವುದು ಉಲ್ಲೇಖಾರ್ಹ.