ಎಲ್ಲಿವರೆಗೆ ಮೋದಿ ಇರುತ್ತಾರೋ? ಅಲ್ಲಿವರೆಗೂ ಅದು ಸಾಧ್ಯವಿಲ್ಲ

Advertisement

ಮೈಸೂರು: ಜನವರಿ 22ರಂದು 500 ವರ್ಷಗಳ ಕನಸು ಅಯೋಧ್ಯೆಯಲ್ಲಿ ನನಸಾಯ್ತು. ಆದರೆ ಇವರು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದರು. INDI ಒಕ್ಕೂಟದವರು ಸನಾತನ ಸಮಾಪ್ತಿ ಮಾಡ್ತೀವಿ ಅಂತಾರೆ. ಹಿಂದೂ ಧರ್ಮ ವಿನಾಶದ ಬಗ್ಗೆ ಮಾತನಾಡುತ್ತಾರೆ. ಎಲ್ಲಿವರೆಗೆ ಮೋದಿ ಇರುತ್ತಾರೋ? ಅಲ್ಲಿವರೆಗೂ ಅದು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಮೈಸೂರಿನ ವಿಜಯಸಂಕಲ್ಪ‌ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಭಾಷಣದುದ್ದಕ್ಕೂ ಬಿಜೆಪಿ ಪ್ರಣಾಳಿಕೆಯ ಅಂಶಗಳನ್ನು ಮತ್ತು ಕರ್ನಾಟಕದಲ್ಲಿ ಅದರ ಅನುಷ್ಠಾನದ ಬಗ್ಗೆ ಪ್ರಸ್ತಾಪಿಸಿದ ಅವರು ರಾಜ್ಯ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯನ್ನೂ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ನಿರಂತರ ವಾಗ್ದಾಳಿ ನಡೆಸಿ, ಬಿಜೆಪಿಯಿಂದ ಮೋದಿಯೇ ಗ್ಯಾರಂಟಿ ಎಂದು ಹೇಳಿದರು.