ಇಸ್ರೋದ ವೈಫಲ್ಯಕ್ಕೆ ಅಚ್ಚರಿ

ಇಸ್ರೋ
Advertisement

ಮೊದಲ ಬಾರಿಗೆ ಸಣ್ಣ ಪ್ರಮಾಣದ ರಾಕೆಟ್​ ವಾಹಕದಲ್ಲಿ ಹಾರಿಬಿಟ್ಟಿದ್ದ ಎರಡು ಉಪಗ್ರಹಗಳು ನಿಗದಿತ ಕಕ್ಷೆ ಸೇರದೇ ವಿಫಲಗೊಂಡಿದ್ದು, ಇಸ್ರೋದ ವೈಫಲ್ಯ ಅಚ್ಚರಿಗೆ ಕಾರಣವಾಗಿದೆ.
ಅತ್ಯಂತ ನಿಖರ, ಕರಾರುವಾಕ್​ ಉಡಾವಣೆ ಮಾಡುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆಜಾದಿ ಸ್ಯಾಟ್​ ಮತ್ತು ಇಸ್ರೋ ನಿರ್ಮಿತ ಭೂಪರಿಭ್ರಮಣ ಉಪಗ್ರಹ ಶ್ರೀಹರಿಕೋಟಾದ ಸತೀಶ್​ ಧವನ್​ ಕೇಂದ್ರದಿಂದ ಎಸ್​ಎಸ್​ಎಲ್​ವಿ(ಸ್ಮಾಲ್​ ಸ್ಯಾಟಲೈಟ್​ ಲಾಂಚಿಂಗ್​ ವೆಹಿಕಲ್​) ಯಿಂದ ಉಡಾವಣೆ ಮಾಡಲಾಗಿತ್ತು. ಆದರೆ, ಅದು ನಿಗದಿತ ಕಕ್ಷೆಗೆ ಸೇರದೇ ಕೊನೆಯಲ್ಲಿ ಸಂಪರ್ಕ ಕಳೆದುಕೊಂಡಿದೆ. 8ಕೆಜಿ ತೂಕದ ಉಪಗ್ರಹವನ್ನು ವಿದ್ಯಾರ್ಥಿಗಳು ರೂಪಿಸಿದ್ದರು.

ಇಸ್ರೋ