ಕೊಲ್ಕತ್ತ: ಕೇವಲ 14ರ ಹರೆಯದಲ್ಲೇ ದೇಶದ ಕ್ರಿಕೆಟ್ ವಲಯವನ್ನು ಬೆರಗುಗೊಳಿಸಿರುವ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೆ ಕ್ರಿಕೆಟ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಇತ್ತೀಚೆಗೆ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್, ಇದೀಗ ಪ್ರಸಿದ್ಧ ಸೈಯ್ಯದ್ ಮುಸ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಅದ್ಭುತ ಶತಕ ಬಾರಿಸಿ ಮಿಂಚಿದ್ದಾರೆ.
ಕೊಲ್ಕತ್ತದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ, ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
ವೈಭವ್ ಸೂರ್ಯವಂಶಿಯ ಅಬ್ಬರ – ಅಜೇಯ 108 ರನ್: ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡ ಆರಂಭದಲ್ಲೇ ಒತ್ತಡಕ್ಕೆ ಒಳಗಾಯಿತು. ಆರಂಭಿಕರಾದ ಬಿಪಿನ್ ಸೌರಭ್ ಕೇವಲ 4 ರನ್ ಮಾಡಿಯೇ ಔಟ್ ಆಗಿ ಪವಿಲಿಯನ್ ಸೇರಿದ್ದರು. ಆದರೆ ಇನ್ನೋರ್ವ ಆರಂಭಿಕ—ವೈಭವ್—ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸಿ, ಅದ್ಭುತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ವೈಭವ್ ಅವರ ಇನ್ನಿಂಗ್ಸ್ ವೈಶಿಷ್ಟ್ಯವೆಂದರೆ 61 ಎಸೆತಗಳಲ್ಲಿ 108 ರನ್‌ಗಳನ್ನು ಸಿಡಿಸಿ ಅಜೆಯರಾಗಿ ಉಳಿದರು. 7 ಬೌಂಡರಿ, 7 ಸಿಕ್ಸರ್‌ಗಳ ಮೂಲಕ ಕೊನೆಯವರೆಗೂ ಅಜೇಯರಾಗಿ 177+ ಸ್ಟ್ರೈಕ್ ರೇಟ್ ಮೂಲಕ ಆಡಿ ತಂಡಕ್ಕೆ ಭರ್ಜರಿ 177 ರನ್ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿ ತಮ್ಮ 14ರ ಹರೆಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಟಗಾರರಂತೆ ತಾಳ್ಮೆ, ಹೊಡೆತಗಳ ವೈವಿಧ್ಯ ಮತ್ತು ಅಬ್ಬರ—all-in-one ಪ್ರದರ್ಶನ ನೀಡಿದರು
ಮಹಾರಾಷ್ಟ್ರದ ನಾಯಕ ಪೃಥ್ವಿ ಶಾ ಹೊಡೆತ, ತಂಡಕ್ಕೆ ಗೆಲುವು: 177 ರನ್‌ಗಳ ಗುರಿ ಬೆನ್ನಟ್ಟಿದ ಮಹಾರಾಷ್ಟ್ರ ತಂಡದ ಪರ ನಾಯಕ ಪೃಥ್ವಿ ಶಾ ಆಕ್ರಮಣಕಾರಿ ಆರಂಭ ನೀಡಿದರು. 30 ಎಸೆತಗಳಲ್ಲಿ 66 ರನ್‌ಗಳಿಸಿ 11 ಬೌಂಡರಿ + 1 ಸಿಕ್ಸರ್‌ಗಳನ್ನು ಸಿಡಿಸಿದರು. ಮಧ್ಯದಲ್ಲಿ ಕೆಲವು ವಿಕೆಟ್‌ಗಳು ಬಿದ್ದರೂ, ಮಹಾರಾಷ್ಟ್ರ 7 ವಿಕೆಟ್ ಕಳೆದುಕೊಂಡು ಗುರಿ ದಾಟಿ ಗೆಲುವಿನ ನಗು ಬೀರಿತು.
BCCI Domestic ಶ್ಲಾಘನೆ: ವೈಭವ್ ಅವರ ಅದ್ಭುತ ಸೆಂಚುರಿ ಪ್ರದರ್ಶನಕ್ಕೆ BCCI Domestic ಅಧಿಕೃತ ಖಾತೆಯಲ್ಲಿ ಪ್ರಸಂಸೆ ಸಲ್ಲಿಸಲಾಗಿದೆ. ಅವರ ಪೋಸ್ಟ್ ವೈರಲ್ ಆಗಿದ್ದು, ಭಾರತದ ಯುವ ಕ್ರಿಕೆಟ್ ಪ್ರತಿಭೆ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟ್ ಭವಿಷ್ಯದ ‘ರೈಸಿಂಗ್ ಸೂಪರ್ ಸ್ಟಾರ್’ — ವೈಭವ್ ಸೂರ್ಯವಂಶಿ: ವೈಭವ್ ಅವರ ಈ ಸಾಧನೆ ಮೂಲಕ ಟಿ20 ಡೊಮೆಸ್ಟಿಕ್ ವಲಯದಲ್ಲಿ ದಾಖಲೆ ಮಟ್ಟದ್ದಾಗಿದೆ. ಕಿರಿಯ ವಯಸ್ಸಿನಲ್ಲಿಯೇ ನಿರ್ಣಾಯಕ ಪ್ರದರ್ಶನ ನೀಡಿ ಭವಿಷ್ಯದಲ್ಲಿ ಟೀಂ ಇಂಡಿಯಾ ಕಡೆಗೆ ಸಾಗಬಹುದಾದ ಮತ್ತೊಂದು ಅಪರೂಪದ ಪ್ರತಿಭೆ ಎಂಬ ನಂಬಿಕೆ ನಿರೀಕ್ಷೆ ಹುಟ್ಟಿಸಿದೆ.
























Sup dudes, just wanna share boompkr1game. Tried it out of boredom and ended up hooked. Not bad, not bad at all. Get your game on here: boompkr1game