WPL: ಆರ್‌ಸಿಬಿಗೆ ಗೆಲುವಿನ ಹ್ಯಾಟ್ರಿಕ್

0
4

ಮುಂಬೈ: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿಯ ಗೆಲುವಿನ ನಾಗಾಲೋಟ ಮುಂದುವರೆದಿದೆ. ಮೊದಲ ಪಂದ್ಯದಿಂದ ಹಿಡಿದು ಶುಕ್ರವಾರ ಅಂತ್ಯಗೊಂಡ ಗುಜರಾತ್ ಜೈಂಟ್ಸ್ ವಿರುದ್ಧ ತನ್ನ 3ನೇ ಪಂದ್ಯದಲ್ಲೂ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಆರ್‌ಸಿಬಿಯ ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಹಾಗೂ ರಾಧಾ ಯಾದವ್‌ರ ಶತಕದ ಜೊತೆಯಾಟ ಹಾಗೂ ಬೌಲಿಂಗ್‌ನಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಮಾಡಿದ ಮ್ಯಾಜಿಕ್‌ನಿಂದ ಗುಜರಾತ್ ಜೈಂಟ್ಸ್ ತಂಡದ ಬ್ಯಾಟರ್‌ಗಳು ಪರದಾಟ ನಡೆಸಿದರು.

ಈ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗುತ್ತಿದ್ದ ಗುಜರಾತ್ ಜೈಂಟ್ಸ್ ಶುಕ್ರವಾರ ಮಾತ್ರ ಟಾಸ್ ಗೆದ್ದರೂ ಆರ್‌ಸಿಬಿಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆದ್ರೆ, ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೂ, ಆರ್‌ಸಿಬಿ ಆರಂಭ ಮಾತ್ರ ಹೀನಾಯವಾಗಿತ್ತು. ತಂಡದ ಮೇಲ್ಪಂಕ್ತಿಯ ನಾಲ್ವರು ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು.

ಈ ವೇಳೆ ಅತ್ಯವಶ್ಯಕವಾಗಿ ಜೊತೆಯಾಟ ಕಟ್ಟಬೇಕಿದ್ದ ಅನಿವಾರ್ಯತೆ ರಾಧಾ ಯಾದವ್ ಹಾಗೂ ರಿಚಾ ಘೋಷ್ ಮೇಲಿತ್ತು. ಆದ್ರೆ, ಈ ಜೋಡಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿತು. ಕೇವಲ 60 ಎಸೆತಗಳಲ್ಲಿ 105 ರನ್‌ಗಳನ್ನು ಗಳಿಸಿದ ಈ ಜೋಡಿ ತಂಡವನ್ನು 150ರ ಗಡಿಗೆ ತಂದು ನಿಲ್ಲಿಸಿದರು.ನಡಿನೇ ಡಿ ಕ್ಲಾರ್ಕ್ ಕೂಡ 26 ರನ್‌ಗಳ ಕಾಣಿಕೆ ನೀಡಿದ್ದರಿಂದ, ಆರ್‌ಸಿಬಿ 7 ವಿಕೆಟ್‌ಗಳನ್ನು ಕಳೆದುಕೊಂಡು 182 ರನ್‌ಗಳನ್ನು ಗಳಿಸಿತು.

ಬೃಹತ್ ಮೊತ್ತಕ್ಕೆ ಹೆಸರುವಾಸಿಯಾಗಿದ್ದ ಜಿಟಿ ಪಡೆ ಆರಂಭದಲ್ಲೇ ಕುಸಿತ ಕಂಡಿತು. ಸೋಫಿ ಡಿವೈನ್ 8 ರನ್‌ಗಳಿಸಿ ನಿರಾಸೆ ಮೂಡಿಸಿದರು. ಸಾಲದೆಂಬಂತೆ 35ರನ್‌ಗಳ ಅಂತರದಲ್ಲಿ ಐವರು ಔಟಾದರು. ಇದರಿಂದ, ಒತ್ತಡ ಭಾರತಿ ಫುಲ್ಮಾಲಿ ಹಾಗೂ ಕಾಶ್ವಿ ಗೌತಮ್ ಮೇಲೆ ಬಿತ್ತು. ಅದ್ರಲ್ಲೂ ಸ್ಲಾಗ್ ಓವರ್‌ಗಳಲ್ಲಿ ಒತ್ತಡ ಹೆಚ್ಚಾದ ನಂತರ ಜೈಂಟ್ಸ್ ಪಡೆಗೆ ಸೋಲಿನತ್ತ ಹೆಜ್ಜೆ ಹಾಕಿತು.

Previous articleಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ಇನ್ನಿಲ್ಲ