CWC25: ವನಿತೆಯರ ತಂಡಕ್ಕೆ ಶುಭ ಹಾರೈಸಿದ ಟೀಮ್‌ ಇಂಡಿಯಾ

0
19

ಗುವಾಹಟಿ: ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಆರಂಭಗೊಳ್ಳಲಿರುವ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 (CWC25)ಕ್ಕೆ ಐಸಿಸಿ ಟಿಕೆಟ್‌ ಬಿಡುಗಡೆ ಮಾಡಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಭಾರತಿಯ ಪುರಷರ ತಂಡ ಶುಭ ಹಾರೈಸಿರುವ ವಿಡಿಯೋ ವೈರಲ್‌ ಆಗಿದೆ.

ಭಾರತ ಹಾಗೂ ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಈ ಪಂದ್ಯವು ವಿಶ್ವಕಪ್‌ಗೆ ಭರ್ಜರಿ ಚಾಲನೆ ನೀಡಲಿದ್ದು, ಅಂಪೈರ್ ತಂಡದಲ್ಲಿ ಅನುಭವಸಂಪನ್ನ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಿಳಾ ಅಂಪೈರ್‌ಗಳೇ ಇದ್ದಾರೆ ಎನ್ನುವುದು ವಿಶೇಷ.

ಐಸಿಸಿ ಪ್ರಕಟಣೆಯ ಪ್ರಕಾರ: ಆನ್-ಫೀಲ್ಡ್ ಅಂಪೈರ್‌ಗಳು: ಕ್ಲೇರ್ ಪೊಲೊಸಾಕ್, ಎಲೋಯಿಸ್ ಶೆರಿಡನ್. ಮೂರನೇ ಅಂಪೈರ್ (ಟಿವಿ ಅಂಪೈರ್): ಇನ್ನೂ ಘೋಷಿಸಬೇಕಿದೆ. ನಾಲ್ಕನೇ ಅಂಪೈರ್: ಸ್ಥಳೀಯ ಸಮಿತಿಯಿಂದ ನೇಮಕವಾಗುವ ಸಾಧ್ಯತೆ

ಕ್ಲೇರ್ ಪೊಲೊಸಾಕ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಪುರುಷರ ಐಸಿಸಿ ಟೂರ್ನಮೆಂಟ್‌ನಲ್ಲಿ (ವಿಶ್ವಕಪ್ 2019) ಅಂಪೈರ್ ಮಾಡಿದ ಮಹಿಳೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಎಲೋಯಿಸ್ ಶೆರಿಡನ್ ಕೂಡಾ ವಿಶ್ವದ ಅಗ್ರ ಮಹಿಳಾ ಅಂಪೈರ್‌ಗಳಲ್ಲಿ ಒಬ್ಬರು. ಇವರ ನಿಯೋಜನೆ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಮತ್ತೊಂದು ಸಕಾರಾತ್ಮಕ ಹೆಜ್ಜೆ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ತಂಡವು ಈ ಬಾರಿ ವಿಶ್ವಕಪ್‌ನ್ನು ಗೆಲ್ಲುವ ಗುರಿಯೊಂದಿಗೆ ಮೈದಾನಕ್ಕಿಳಿಯುತ್ತಿದ್ದು, ಶ್ರೀಲಂಕಾ ಕೂಡ ತನ್ನ ಯುವ ಆಟಗಾರ್ತಿಯರ ಬಲದಿಂದ ಅಚ್ಚರಿ ಮೂಡಿಸಲು ತುದಿಗಾಲಲ್ಲಿ ನಿಂತಿದೆ. ಗುವಾಹಟಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯಕ್ಕಾಗಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ನಿರ್ಮಾಣವಾಗಿದೆ.

ಐಸಿಸಿ ಮಹಿಳಾ ವಿಶ್ವಕಪ್ 2025 ಪ್ರಮುಖ ಅಂಶಗಳು:

ಉದ್ಘಾಟನಾ ಪಂದ್ಯ: ಭಾರತ vs ಶ್ರೀಲಂಕಾ – ಸೆಪ್ಟೆಂಬರ್ 30, ಗುವಾಹಟಿ

ಅಂಪೈರ್‌ಗಳು: ಕ್ಲೇರ್ ಪೊಲೊಸಾಕ್, ಎಲೋಯಿಸ್ ಶೆರಿಡನ್

ಒಟ್ಟು ಪಂದ್ಯಗಳು: 31

ಫೈನಲ್: ನವೆಂಬರ್ ತಿಂಗಳ ಆರಂಭದಲ್ಲಿ ಅಹಮದಾಬಾದ್‌ನ ನರೆಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ನಿರೀಕ್ಷೆ ಇದೆ. ಈ ಘೋಷಣೆಯೊಂದಿಗೆ, ಅಭಿಮಾನಿಗಳಲ್ಲಿ ವಿಶ್ವಕಪ್ ಜ್ವರ ಹೆಚ್ಚುತ್ತಿದ್ದು, ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯವು ವಿಶ್ವದ ಗಮನ ಸೆಳೆಯಲಿದೆ ಎಂಬುದು ಖಚಿತ.

ಆನಲೈನ್‌ ಟಿಕೆಟ್‌ ಬುಕಿಂಗ್‌ : https://tickets.cricketworldcup.com/explore/c/icc-cricket-world-cup

Previous articleರಾಮನಗರ; 4 ಕೆರೆಗಳಲ್ಲಿ ಆರಂಭವಾಗಲಿದೆ ದೋಣಿ ವಿಹಾರ
Next articleಬೆಂಗಳೂರಲ್ಲಿ ವರ್ಷಕ್ಕೆ 2.5 ತಿಂಗಳು ಟ್ರಾಫಿಕ್‌ನಲ್ಲೇ ಕಳೆದೋಗುತ್ತೆ!

LEAVE A REPLY

Please enter your comment!
Please enter your name here