Home ಕ್ರೀಡೆ ಕಂಚಿನ ಪದಕ ಗೆದ್ದ ಪ್ರಣತಿ ನಾಯಕ್

ಕಂಚಿನ ಪದಕ ಗೆದ್ದ ಪ್ರಣತಿ ನಾಯಕ್

0

ನವ ದೆಹಲಿ: ಹಂಗೇರಿಯ ಸ್ಜೊಂಬಥೇಲಿಯಲ್ಲಿ ನಡೆದ ವರ್ಲ್ಡ್ ಚಾಲೆಂಜ್ ಕಪ್ ಜಿಮ್ನಾಸ್ಟಿಕ್ಸ್ ಪಂದ್ಯಾವಳಿಯಲ್ಲಿ ಎರಡು ಬಾರಿಯ ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಪ್ರಣತಿ ನಾಯಕ್ ಮೂರನೇ ಸ್ಥಾನದೊಂದಿಗೆ ಚೀನಾದ ಹಾಂಗ್‌ಝೌನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಪ್ರಣತಿ ಈ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದಾರೆ.
ವಾಲ್ಟ್ ಫೈನಲ್‌ನಲ್ಲಿ ಪ್ರಣತಿ ನಾಯಕ್ ೧೨.೯೬೬ ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರೆ, ಹಂಗೇರಿಯ ಗ್ರೆಟಾ ಮೇಯರ್ (೧೩.೧೪೯) ಮತ್ತು ಜೆಕ್ ಗಣರಾಜ್ಯದ ಆಲಿಸ್ ವ್ಲಕೋವಾ (೧೨.೯೯೯) ನಂತರದ ಸ್ಥಾನದಲ್ಲಿದ್ದಾರೆ. ನಂತರ ಅವರು ೧೨.೯೬೬ ಅಂಕಗಳನ್ನು ಗಳಿಸಿದ್ದ ಗ್ರೀಸ್‌ನ ಅಥನಾಸಿಯಾ ಮೆಸಿರಿ ಅವರನ್ನು ಸಿಂಗಲ್ ವಾಲ್ಟ್ ಟೈ-ಬ್ರೇಕ್‌ನಲ್ಲಿ ೧೩.೦೬೬ ಅಂಕಗಳಿಂದ ಸೋಲಿಸಿದರು.

Exit mobile version