Home ಸುದ್ದಿ ದೇಶ ಅಕ್ಷರಧಾಮ ದೇಗುಲದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ

ಅಕ್ಷರಧಾಮ ದೇಗುಲದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ

0

ನವದೆಹಲಿ: ಭಾರತದಲ್ಲಿ ನಿನ್ನೆಯಿಂದ ಜಿ೨೦ಶೃಂಗಸಭೆ ನಡೆಯುತ್ತಿದೆ. ವಿಶ್ವದ ಗಣ್ಯಾತಿಗಣ್ಯರು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಅದರ ಜೊತೆಗೆ ಅಪರೂಪಕ್ಕೆ ಭಾರತಕ್ಕೆ ಬಂದಿರುವ ಜಾಗತಿಕ ನಾಯಕರು ಇಲ್ಲಿನ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಭಾರತದಲ್ಲಿ ನಡೆಯುತ್ತಿರುವ ಜಿ-೨೦ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ದೆಹಲಿಯ ಅಕ್ಷರಧಾಮ ದೇವಸ್ಥಾನ ಸುಮಾರು ೪೫ ನಿಮಿಷಗಳ ಕಾಲ ಸಮಯ ಕಳೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅಕ್ಷರಧಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ಇದು ಬ್ರಿಟನ್ ಪ್ರಧಾನಿಯಾದ ನಂತರ ರಿಷಿ ಸುನಕ್ ಅವರ ಮೊದಲ ಅಧಿಕೃತ ಭಾರತ ಭೇಟಿಯಾಗಿದೆ. ಹೀಗಾಗಿ ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

https://twitter.com/samyuktakarnat2/status/1700814711200080329

Exit mobile version