ಯಂತ್ರ ಶ್ರೀ ಕಾರ್ಯಕ್ರಮ ಅನುಷ್ಠಾನ

0
15

ಮಂಡ್ಯ: ಜಿಲ್ಲೆಯ ಪಾಂಡುಪುರ ತಾಲೂಕಿನ ಅರಳಕುಪ್ಪೆ ಸೀತಾಪುರ ಗ್ರಾಮದ ಲಕ್ಷ್ಮಣ ರವರ ಜಮೀನಿನಲ್ಲಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1000 ಎಕ್ರೆ ಯಂತ್ರ ಶ್ರೀ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಿದ್ದು ಮುಂಗಾರು ಹಂಗಾಮಿನ ಯಂತ್ರಕೃತ ಭತ್ತ ಬೇಸಾಯಕ್ಕೆ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ರವರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿರವರು ಚಾಲನೆ ನೀಡಿದರು

ಯಂತ್ರ ಶ್ರೀ ಕಾರ್ಯಕ್ರಮವನ್ನು ರೈತರು ಅನುಷ್ಠಾನ ಮಾಡುವುದರಿಂದ ಕೂಲಿ ಆಳುಗಳ ಸಮಸ್ಯೆ ನಿವಾರಣೆ ಕಡಿಮೆ ಖರ್ಚು ಸರಿಯಾದ ಸಮಯಕ್ಕೆ ನಾಟಿ ಹಾಗೂ ಸಾಲಿನಿಂದ ಸಾಲಿಗೆ ಹಂತರದಲ್ಲಿ ನಾಟಿ ಮಾಡುವುದರಿಂದ ಉತ್ತಮವಾದ ಬೆಳೆ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಭತ್ತ ಬೇಸಾಯಕ್ಕೆ ನಾಟಿ ಆಳುಗಳ ಕೊರತೆ ಇದ್ದು ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ ಯಾಂತ್ರಿಕೃತ ಭತ್ತ ಬೇಸಾಯವನ್ನ ಅನುಷ್ಠಾನ ಮಾಡುವುದರಿಂದ ಕೂಲಿ ಆಳುಗಳ ಸಮಸ್ಯೆ ನಿವಾರಣೆ ಮಾಡಬಹುದು ಯಂತ್ರ ಶ್ರೀ ಕಾರ್ಯಕ್ರಮವು ರೈತರಿಗೆ ಉಪಯೋಗವಾಗುತ್ತದೆ ಎಂದು chsc ನಿರ್ದೇಶಕರಾದ ಕೆ ಚಿದಾನಂದ ರವರು ತಿಳಿಸಿದರು

ಯಂತ್ರ ಶ್ರೀ ಕಾರ್ಯಕ್ರಮ ರೈತರು ಅನುಷ್ಠಾನ ಮಾಡುವುದರಿಂದ ಹೊಸ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಂಡಂತಾಗುತ್ತದೆ ಕೂಲಿ ಆಳುಗಳ ಸಮಸ್ಯೆ ನಿವಾರಣೆ ಆಗುತ್ತದೆ ಆದ್ದರಿಂದ ಪೂಜ್ಯರು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಅನುಷ್ಠಾನ ಮಾಡಿರುವ ಯಂತ್ರ ಶ್ರೀ ಕಾರ್ಯಕ್ರಮ ರೈತರಿಗೆ ವರದಾನವಾಗಲಿದೆ ಎಂದು ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ರವರು ಶುಭ ಹಾರೈಸಿದರು

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಿ ಎಸ್ ಪುಟ್ಟರಾಜು ಕೆ ಆರ್ ಪೇಟೆ ಶಾಸಕರಾದ ಎಚ್‌ ಟಿ ಮಂಜಣ್ಣ ಸಿ ಹೆಚ್ ಎಸ್ ಸಿ ಯೋಜನಾಧಿಕಾರಿಗಳಾದ ಶಶಿಕುಮಾರ್ ಜೆಡಿಎ ಅಶೋಕ್ ಕೃಷಿ ಇಲಾಖೆಯ ಡಿಡಿಎ ಮಮತಾರವರು ನಾಟಿ ಯಂತ್ರ ಬ್ಯಾಂಕಿನ ಕೃಷಿ ಮೇಲ್ವಿಚಾರಕರು ನವೀನ್ ಕುಮಾರ್ ಆನಂದ್ ಸತೀಶ್ ಸರ್ವಮಂಗಳ ಸುಷ್ಮಾ ಸಚಿನ್ ಪ್ರಭು ಧನಂಜಯ ಸುರೇಶ್ ಹಾಗೂ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು

Previous articleಟೀಕೆ ಟಿಪ್ಪಣೆಗಿಂತ ಸರಿಪಡಿಸುವುದು ನಮ್ಮ ಆದ್ಯತೆ
Next articleಹಾರನಹಳ್ಳಿ ನೇತೃತ್ವದ ವಿಪ್ರ ಮುಖಂಡರ ಸಭೆ ಯಶಸ್ವಿ