ಬೆಂಗಳೂರಿನಲ್ಲಿ ಹಣದ ಮಳೆ…!

ಬೆಂಗಳೂರು: ಹಣ ಕೇಳಿದ್ರೆ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವ ಇಂದಿನ ದಿನದಲ್ಲಿ ಇಲ್ಲೊಬ್ಬ ಫ್ಲೈ ಓವರ್‌ ಮೇಲೆ ನಿಂತುಕೊಂಡು ಹಣದ ಮಳೆಯನ್ನೇ ಸುರಿಸಿದ್ದಾನೆ. ಈತ ಹಣ ಸುರಿಯುವುದನ್ನು ನೋಡಿ ಜನರೇ ದಂಗಾಗಿದ್ದಾರೆ.
ಇಂದು ಮುಂಜಾನೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಮೇಲೆ ನಿಂತುಕೊಂಡ ಅರುಣ ಎಂಬಾತ ಹಣದ ಸುರಿಮಳೆಗೈದಿದ್ದು, ಆ ಹಣವನ್ನು ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.