ನಮ್ಮ ಮೆಟ್ರೋ: ಹಳದಿ ಮಾರ್ಗಕ್ಕೆ ಪ್ರಥಮ ಬೋಗಿ

0
39

ನಮ್ಮ ಮೆಟ್ರೋದ 204 ಬೋಗಿಗಳ ನಿರ್ಮಾಣದ ಕಾಂಟ್ರಾಕ್ಟ್ ಪಡೆದಿರುವ ಟೀಟಾಘರ್ ರೈಲು ನಿಗಮ

ಬೆಂಗಳೂರ: ನಮ್ಮ ಮೆಟ್ರೋ – ಹಳದಿ ಮಾರ್ಗದ ಪ್ರಥಮ ರೈಲು ಬೋಗಿಗಳಿಗೆ ಇಂದು ಕೊಲ್ಕತ್ತಾದಲ್ಲಿ ಚಾಲನೆ ನೀಡಲಾಯಿತು,
ಈ ಕುರಿತಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜೀಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಮ್ಮ ಮೆಟ್ರೋದ 204 ಬೋಗಿಗಳ ನಿರ್ಮಾಣದ ಕಾಂಟ್ರಾಕ್ಟ್ ಪಡೆದಿರುವ ಟೀಟಾಘರ್ ರೈಲು ನಿಗಮವು, ಇಂದು ಪ್ರಥಮ ಬೋಗಿಯನ್ನು ನಮ್ಮ ಮೆಟ್ರೊಗೆ ಒದಗಿಸಿದೆ. ಈ ಮಧ್ಯೆ ಹಲವು ಬಾರಿ ನಾನು ಟೀಟಾಘರ್ ನ ಘಟಕಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ್ದು, ಶೀಘ್ರ ಕಾರ್ಯಾರಂಭಕ್ಕೆ ಸಹಕಾರ ನೀಡಿರುವ ಕೇಂದ್ರ ಸಚಿವರಿಗೆ ಬೆಂಗಳೂರು ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಟೀಟಾಘರ್‌ನಲ್ಲಿ ತಯಾರಾಗಿರುವ ಮೊದಲ ಮೆಟ್ರೋ ಬೋಗಿಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರು ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರತಿ ತಿಂಗಳೂ ಒಂದು ಬೋಗಿ ನಿಯೋಜಿತ ಮೆಟ್ರೋ ಲೈನ್‌ಗೆ ಸೇರಿಕೊಳ್ಳಲಿದ್ದು, ನಂತರ ಪ್ರತೀ ತಿಂಗಳೂ 2 ಬೋಗಿಗಳು ಈ ಮಾರ್ಗಕ್ಕೆ ಸೇರಲಿವೆ. ಜಯನಗರದ ಆರ್ ವಿ ರೋಡ್‌ನಿಂದ, ಬೊಮ್ಮಸಂದ್ರದ ವರೆಗಿನ 18.8 ಕಿಮೀ ಉದ್ದದ ಹಳದಿ ಮಾರ್ಗದ ಆರಂಭಗೊಂಡಲ್ಲಿ ಬೆಂಗಳೂರು ದಕ್ಷಿಣ & ಐಟಿ,ಬಿಟಿ ಕಾರಿಡಾರ್‌ಗಳ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ.

Previous articleರಾಜ್ಯದಲ್ಲಿ HMPV ವೈರಸ್: ಸರ್ಕಾರದಿಂದ ಸೂಕ್ತ ಮುಂಜಾಗ್ರತಾ ಕ್ರಮ
Next articleಚಾಮರಾಜನಗರ: ಹೃದಯಾಘಾತ, 3ನೇ ತರಗತಿ ವಿದ್ಯಾರ್ಥಿನಿ ಸಾವು