Home ತಾಜಾ ಸುದ್ದಿ ದೇಶದ ಆರನೇ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ದೇಶದ ಆರನೇ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

0
116

ನವದೆಹಲಿ: ದೇಶದ ಆರನೇ ಸೆಮಿ ಕಂಡಕ್ಟರ್ ಘಟಕವನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಅವರು ಭಾರತದ ಸೆಮಿ ಕಂಡಕ್ಟರ್ ಗುರಿಯ ಭಾಗವಾಗಿ ಉತ್ತರ ಪ್ರದೇಶದ ಜೀವಾರ್‌ನಲ್ಲಿ ದೇಶದ ಆರನೇ ಸೆಮಿ ಕಂಡಕ್ಟರ್ ಘಟಕವನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ ಈ ಘಟಕವು ಎಚ್‌ಸಿಎಲ್ ಹಾಗೂ ಫಾಕ್ಸ್ ಕಾನ್ ನಡುವಣ ಜಂಟಿ ಉದ್ಯಮವಾಗಿರಲಿದ್ದು. 5 ಸೆಮಿ ಕಂಡಕ್ಟರ್ ಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಮೂರು ಘಟಕಗಳ ನಿರ್ಮಾಣ ಕಾರ್ಯಗಳು ತ್ವರಿತವಾಗಿ ನಡೆಯುತ್ತಿದ್ದು, ಈ ಪೈಕಿ ಒಂದು ಘಟಕ ವರ್ಷದ ಅಂತ್ಯದಲ್ಲಿ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ ಎಂದರು.