ಜಮ್ಮು ಮತ್ತು ಕಾಶ್ಮೀರದಲ್ಲಿ ಸರಣಿ ಬಾಂಬ್ ಸ್ಫೋಟಗಳ ನಡುವೆ, ‘ಪಿಐಎ’ ಎಂದು ಬರೆಯಲಾದ ವಿಮಾನದ ಆಕಾರದ ಬಲೂನ್‌ಅನ್ನು ಭಾನುವಾರ ಖೌರ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ 2021ರಲ್ಲಿ, ಕಣಿವೆಯ ವಿವಿಧ ಸ್ಥಳಗಳಿಂದ ಇದೇ ರೀತಿಯ ಹಲವಾರು ಆಕಾಶಬುಟ್ಟಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೇ ಶನಿವಾರ ಕಣಿವೆಯು ಕನಿಷ್ಠ ಮೂರು ಸ್ಫೋಟಗಳಿಗೆ ಸಾಕ್ಷಿಯಾಗಿದೆ, ಇದರಲ್ಲಿ ಏಳು ಜನರು ಗಾಯಗೊಂಡಿದ್ದಾರೆ.