Home ಸುದ್ದಿ ರಾಜ್ಯ ಕರ್ನಾಟಕದ ಮೊದಲ ಅಗ್ಗದ ಬೆಲೆಯ AI ಕಂಪ್ಯೂಟರ್ ಬಿಡುಗಡೆಗೆ ಸಜ್ಜು

ಕರ್ನಾಟಕದ ಮೊದಲ ಅಗ್ಗದ ಬೆಲೆಯ AI ಕಂಪ್ಯೂಟರ್ ಬಿಡುಗಡೆಗೆ ಸಜ್ಜು

1

ಬೆಂಗಳೂರು: ಕರ್ನಾಟಕ ಸರ್ಕಾರವು ಕೈಗೆಟುಕುವ ದರದಲ್ಲಿ ಸಾಮಾನ್ಯ ಜನರು, ವಿದ್ಯಾರ್ಥಿಗಳಿಗೆ ತಲುಪುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ‘KEO AI ಕಂಪ್ಯೂಟರ್’ ಅನ್ನು ಮಂಗಳವಾರ (ನ.18) ಬೆಂಗಳೂರಿನಲ್ಲಿ ನಡೆಯುವ Bengaluru Tech Summit 2025 ನಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಿದೆ ಎಂದು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಭಾರತದಲ್ಲಿ ಕೇವಲ 10% ಮನೆಯಲ್ಲಿ ಮಾತ್ರ ಕಂಪ್ಯೂಟರ್ ಇದೆ. ಕರ್ನಾಟಕದಲ್ಲೂ ಇದು ಕೇವಲ 15%. 60% ವಿದ್ಯಾರ್ಥಿಗಳು ಇನ್ನೂ ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಡಿಜಿಟಲ್ ಎಕಾನಮಿ ಜೋರಾಗಿ ಬೆಳೆದು ಬರುತ್ತಿದೆ. ಈ ಅಂತರವನ್ನು ಕಡಿಮೆ ಮಾಡಲು ಮತ್ತು ಕೈಗೆಟಕುವ ದರದಲ್ಲಿ ಶಕ್ತಿಶಾಲಿ ಕಂಪ್ಯೂಟರ್ ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ KEO ಅನ್ನು ಪರಿಚಯಿಸಲಾಗುತ್ತಿದೆ” ಎಂದರು.

KEO ಕಂಪ್ಯೂಟರ್ ಬೆಲೆ: ಬೆಲೆಯ ವಿವರವನ್ನು ನಾಳೆ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ ಬಹಿರಂಗಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಬುಕಿಂಗ್ ಸೌಲಭ್ಯ: ಲಾಂಚ್ ಆದ ಕೂಡಲೇ Keonext.in ನಲ್ಲಿ ಫ್ರೀ ಬುಕ್ಕಿಂಗ್‌ಗೆ ಅವಕಾಶ. ಬುಕಿಂಗ್ ಮಾಡಿದ ಎರಡು ತಿಂಗಳಲ್ಲಿ ವಿತರಣೆ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮಿಟ್ ಅನ್ನು ಉದ್ಘಾಟಿಸಲಿದ್ದಾರೆ.

KEO AI ಕಂಪ್ಯೂಟರ್‌ನ ವಿಶೇಷತೆಗಳು: ಕೈಗೆಟಕುವ AI ಕಂಪ್ಯೂಟರ್ – ಕಡಿಮೆ ಬೆಲೆಯಲ್ಲೇ ಬುದ್ಧಿವಂತ ವ್ಯವಸ್ಥೆ. KEO – Knowledge, Economy, Open-source ಪರಿಕಲ್ಪನೆ. Linux ಆಧಾರಿತ Operating System ಇದು Open-source RISC-V ಪ್ರೊಸೆಸರ್ ಬಳಕೆಯಾಗಲಿದೆ. 4G, Wi-Fi, Ethernet, USB-A, USB-C, HDMI, Audio Jack ಹೊಂದಿದ್ದು. On-device AI core – ಇಂಟರ್ನೆಟ್ ಇಲ್ಲದಿದ್ದರೂ AI ಕಾರ್ಯನಿರ್ವಹಣೆ ಮಾಡಲಿದೆ. Programming, Learning & Productivity tools ಸಜ್ಜಿತವಾಗಿದೆ. DSERT ಪಠ್ಯಕ್ರಮಕ್ಕೆ ಹೊಂದಿಕೊಂಡ AI Agent ‘BUDDH’ – ಕಡಿಮೆ ಸಂಪರ್ಕ ಪ್ರದೇಶದ ವಿದ್ಯಾರ್ಥಿಗಳಿಗೆ ಸಹ ಅತ್ಯಂತ ಉಪಯುಕ್ತ

KEO ಕಂಪ್ಯೂಟರ್ ವಿಶೇಷವಾಗಿ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ಕಲಿಕೆ ಕೇಂದ್ರಗಳು ಹಾಗೂ ಕಡಿಮೆ ಬಜೆಟ್‌ನಲ್ಲಿ AI–ಆಧಾರಿತ ಸಾಧನವನ್ನು ಬಯಸುವ ಕುಟುಂಬಗಳಿಗೆ ಹೊಸ ದಾರಿಯನ್ನು ತೆರೆದು ಕೊಡುವ ನಿರೀಕ್ಷೆ ಇದೆ.

1 COMMENT

  1. ಇದು ಖರ್ಗೆ ಕೊಡುಗೆ. ಇದು ಸದುದ್ಧೇಶದ ಅಭಿವೃದ್ಧಿ ಪಥದ ನಡೆ. ಬೂಟಾಟಿಕೆ ಮಾತನಾಡುವವರಿಗೆ ಖರ್ಗೆ ಉತ್ತರ ಸ್ಪಷ್ಟ, ದಿಟ್ಟ ಹಾಗೂ ನೇರವಾಗಿದೆ

LEAVE A REPLY

Please enter your comment!
Please enter your name here

Exit mobile version