ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಮಹತ್ವದ ವಲಸೆ ಸಂಬಂಧಿತ ಆದೇಶಕ್ಕೆ ಸಹಿ ಹಾಕಿದ್ದು, ಇದರಿಂದಾಗಿ ಅಮೆರಿಕವನ್ನು ಬೆಂಬಲಿಸುವ ವಿದೇಶಿಗರಿಗೆ ವಿಶೇಷ ‘ಗೋಲ್ಡ್ ಕಾರ್ಡ್’ ವಿಸಾ ನೀಡುವ ದಾರಿ ತೆರೆದಿದೆ.
ವಿದೇಶಿ ಹೂಡಿಕೆ ಆಕರ್ಷಿಸಲು ಹೊಸ ಹೆಜ್ಜೆ: ಹೊಸ ನೀತಿಯ ಪ್ರಕಾರ, ಅಮೆರಿಕದ ಖಜಾನೆಗೆ 10 ಲಕ್ಷ ಮಿಲಿಯನ್ ಡಾಲರ್ (trillions ಮಟ್ಟದ ಮೊತ್ತ) ನೀಡುವ ವಿದೇಶಿ ಹೂಡಿಕೆದಾರರು ಅಥವಾ 20 ಲಕ್ಷ ಮಿಲಿಯನ್ ಡಾಲರ್ ಮೌಲ್ಯದ ಪ್ರಯೋಜಕತ್ವ ಒದಗಿಸುವ ಸಂಸ್ಥೆಗಳು ಈ ಗೋಲ್ಡ್ ಕಾರ್ಡ್ ಪಡೆಯುವ ಅರ್ಹತೆ ಹೊಂದಲಿವೆ.
ಈ ವಿಸಾ ಮುಂದಿನ ಹಂತದಲ್ಲಿ ಗ್ರೀನ್ ಕಾರ್ಡ್ ಪಡೆಯುವ ಅವಕಾಶಕ್ಕೂ ಸಹಾಯಕವಾಗಲಿದೆ. ಅಂದರೆ, ಆರಂಭದಲ್ಲಿ ವಿಶೇಷ ವಿಸಾ ರೂಪದಲ್ಲಿ ಪ್ರಾರಂಭವಾದರೂ, ಮುಂದೆ ಅಮೆರಿಕದಲ್ಲಿ ಶಾಶ್ವತ ನಿವಾಸಿ ಹಕ್ಕು ಪಡೆಯಲು ಬಾಗಿಲು ತೆರೆಯುತ್ತದೆ.
ಉದ್ಯೋಗ ಮಾರುಕಟ್ಟೆಗೆ ಬಲ: ಅಮೆರಿಕಾದ ಉದ್ಯಮಗಳಿಗೆ ಬೇಕಾದ ನುರಿತ ವೃತ್ತಿಪರರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. “ನಾವು ನೂರಾರು ಬಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸುತ್ತೇವೆ. ಕಂಪನಿಗಳಿಗೆ ಬೇಕಾದ ನುರಿತ ಕೆಲಸಗಾರು ಅಮೆರಿಕದಲ್ಲೇ ಉಳಿಯಲು ಈ ವ್ಯವಸ್ಥೆ ನೆರವಾಗಲಿದೆ” ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದರು.
ಅಮೆರಿಕಾದಲ್ಲಿ ಕಳೆದ ಕೆಲವು ವರ್ಷಗಳಿಂದ ವಲಸೆ ನೀತಿಯ ಕುರಿತು ತೀವ್ರ ಚರ್ಚೆ ನಡೆಯುತ್ತಿತ್ತು. ಟ್ರಂಪ್ ಆಡಳಿತವು ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ, ಆರ್ಥಿಕ ಹೂಡಿಕೆ ಮತ್ತು ಉದ್ಯೋಗ ಮಾರುಕಟ್ಟೆಗೆ ಉತ್ತೇಜನ ನೀಡಲು ಇಂತಹ ಹೂಡಿಕೆ ಆಧಾರಿತ ವಿಸಾ ಯೋಜನೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ಗ್ರೀನ್ ಕಾರ್ಡ್ ಪಡೆಯಲು ವಿದೇಶಿಗರಿಗೆ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇರುವುದರಿಂದ, ಗೋಲ್ಡ್ ಕಾರ್ಡ್ ಹೊಸ ದಾರಿ ತೆರೆಯಲಿದೆ.
ಅಂತರರಾಷ್ಟ್ರೀಯ ಪ್ರತಿಕ್ರಿಯೆ: ಅಮೆರಿಕಾದ ಈ ಹೆಜ್ಜೆ ಹೂಡಿಕೆ ಆಕರ್ಷಣೆಗೆ ಸಹಕಾರಿ ಎಂದು ವಲಸೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾಮಾನ್ಯ ಉದ್ಯೋಗ ಹುಡುಕುವ ವಲಸಿಗರಿಗೆ ಈ ಯೋಜನೆಯಿಂದ ಯಾವುದೇ ತಕ್ಷಣದ ಪ್ರಯೋಜನ ಸಿಗುವುದಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಭಾರತದ ಮೇಲೆ ಪರಿಣಾಮ
ಐಟಿ ಮತ್ತು ಸ್ಟಾರ್ಟ್‌ಅಪ್‌ಗಳ ಮೇಲೆ ಅವಕಾಶ: ಭಾರತದ ಅನೇಕ ಐಟಿ ಕಂಪನಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೂಡಿಕೆ ಅಥವಾ ಉನ್ನತ ಮಟ್ಟದ ಸಹಭಾಗಿತ್ವ ಮಾಡುವ ಸಂಸ್ಥೆಗಳು ಗೋಲ್ಡ್ ಕಾರ್ಡ್ ಮೂಲಕ ತಮ್ಮ ಹೂಡಿಕೆದಾರರಿಗೆ ಶಾಶ್ವತ ನೆಲೆ ಮತ್ತು ಕೆಲಸದ ಭದ್ರತೆ ಕೊಡಬಹುದು. ಇದು ಸ್ಟಾರ್ಟ್‌ಅಪ್ ಹಾಗೂ ದೊಡ್ಡ ಕಂಪನಿಗಳಿಗೆ ಪಾಸಿಟಿವ್.
ಹೆಚ್ಚಿನ ಹೂಡಿಕೆ ಮಾಡುವ ಸಾಮರ್ಥ್ಯವಿರುವ ಶ್ರೀಮಂತ ಉದ್ಯಮಿಗಳಿಗೆ ಲಾಭ: ಭಾರತದ ಕೋಟ್ಯಾಧಿಪತಿಗಳು, ಪ್ರಮುಖ ಉದ್ಯಮಿಗಳು, ಹೂಡಿಕೆದಾರರು ಅಮೆರಿಕದ ಖಜಾನೆಗೆ ನೇರ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇವರಿಗೆ ಗೋಲ್ಡ್ ಕಾರ್ಡ್ ಸಿಗುವುದರಿಂದ ಕುಟುಂಬ ಸಮೇತ ಅಮೆರಿಕ ಪ್ರವೇಶ, ಶಾಶ್ವತ ವಾಸ, ಹಾಗೂ ಬಿಸಿನೆಸ್ ವಿಸ್ತರಣೆ ಸುಲಭ.
ಮಧ್ಯಮವರ್ಗದ ವಿದ್ಯಾರ್ಥಿಗಳು ಮತ್ತು ನುರಿತ ಕೆಲಸಗಾರರಿಗೆ ಹಿಂಜರಿಕೆ: ಸಾಮಾನ್ಯವಾಗಿ ಭಾರತೀಯರು H-1B, ವಿದ್ಯಾರ್ಥಿ ವಿಸಾ, ಅಥವಾ ಕೆಲಸದ ವಿಸಾ ಮೂಲಕ ಅಮೆರಿಕ ಪ್ರವೇಶಿಸುತ್ತಾರೆ. ಆದರೆ ಈ ಹೊಸ ನೀತಿಯಲ್ಲಿ ಹೂಡಿಕೆಯ ಶಕ್ತಿ ಮುಖ್ಯ. ಹೀಗಾಗಿ ಸಾಮಾನ್ಯ ವಿದ್ಯಾರ್ಥಿ ಅಥವಾ ನುರಿತ ಎಂಜಿನಿಯರ್‌ಗಳಿಗೆ ನೇರ ಪ್ರಯೋಜನ ಕಡಿಮೆ. ಅವರು ಇನ್ನೂ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ.