ಪಾಲಕ್ ಪನ್ನೀರ್‌ನಿಂದ ಭಾರತೀಯ ವಿದ್ಯಾರ್ಥಿಗಳಿಗೆ ಸಿಕ್ತು 1.8 ಕೋಟಿ

0
4

ವಾಷಿಂಗ್ಟನ್: ಭಾರತೀಯ ಪದ್ಧತಿಯ ಆಹಾರದ ವಾಸನೆಗೆ ಸಂಬಂಧ ಅಮೆರಿಕದಲ್ಲಿ ತಾರತಮ್ಯಗೆ ಗುರಿಯಾಗಿದ್ದ ಭಾರತೀಯ ಮೂಲದ ಸಂಶೋಧನಾ ವಿದ್ಯಾರ್ಥಿಗಳಿಗೆ ಕೊಲರಡೊ ಬೋಲ್ಡರ್ ವಿಶ್ವವಿದ್ಯಾಲಯ ಬರೋಬ್ಬರಿ 1.8 ಕೋಟಿ ರೂ. ಪರಿಹಾರ ನೀಡಿದೆ. ಆ ಮೂಲಕ ಇಬ್ಬರು ವಿದ್ಯಾರ್ಥಿಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.

2023 ಸೆಪ್ಟೆಂಬರ್ 5ರಂದು ಸಂಶೋಧನಾ ವಿದ್ಯಾರ್ಥಿಗಳಾದಗಿದ್ದ ಆದಿತ್ಯ ಪ್ರಕಾಶ ಹಾಗೂ ಉರ್ಮಿ ಭಟ್ಟಾಚಾರ್ಯ ಅವರು ಮೈಕ್ರೋವೇವ್‌ನಲ್ಲಿ ಪಾಲಕ್ ಪನ್ನೀರ್ ಬಿಸಿ ಮಾಡುತ್ತಿದ್ದಾಗ ಅದರ ವಾಸನಗೆ ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಬೆನ್ನಲ್ಲೇ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡದೆ ಕ್ರಮಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಯೂನಿವರ್ಸಿಟಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವಿಶ್ವವಿದ್ಯಾಲಯ 1.8 ಕೋಟಿ ಪರಿಹಾರ ಹಾಗೂ ಪಿಎಚ್‌ಡಿ ಪದವಿ ನೀಡುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಆದೇಶಿಸಿದೆ.

Previous articleಆನ್‌ಲೈನ್ ಬೆಟ್ಟಿಂಗ್‌ನಿಂದ ನಟಿ ಕಾರುಣ್ಯ ರಾಮ್ ಕುಟುಂಬ ಛಿದ್ರ