ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸೆಪ್ಟೆಂಬರ್ 22ರಿಂದ ಇದು ಜಾರಿಗೆ ಬರಲಿದೆ. ದೇಶದ ವಿವಿಧ ಉತ್ಪನ್ನಗಳ ಖರೀದಿಯಲ್ಲಿ ಹಲವು ವ್ಯತ್ಯಾಸಗಳು ಆಗಲಿವೆ.
ಜಿಎಸ್‌ಟಿ ನೀತಿ ಬದಲಾವಣೆ ಬಳಿಕ ದೇಶದಲ್ಲಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಈ ಸುದ್ದಿ ಕಾರು ಖರೀದಿ ಮಾಡುವವರಿಗೆ ಹೊಸ ಉತ್ಸಾಹ ತುಂಬಿದೆ. ಬಹುತೇಕ ಜನಪ್ರಿಯ ಕಾರುಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ.
ದಸರಾ, ದೀಪಾವಳಿಗೆ ಹೊಸ ಕಾರು ಖರೀದಿ ಮಾಡುವ ಆಲೋಚನೆ ಇರುವವರು ಇದನ್ನು ಗಮನಿಸಿ ಖರೀದಿ ಮಾಡಬಹುದು. ಜಿಎಸ್‌ಟಿ ಕಾರುಗಳ ಬೆಲೆಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ? ಎಂಬ ವಿವರ ಇಲ್ಲಿದೆ.
ಕಾರುಗಳ ಮೇಲೆ ಜಿಎಸ್‌ಟಿಯನ್ನು ವಿಧಿಸುವಾಗ, ವಾಹನದ ಪ್ರಕಾರ (ಸಣ್ಣ ಕಾರು, ಮಧ್ಯಮ ಗಾತ್ರದ ಕಾರು, ಎಸ್‌ಯುವಿ), ಎಂಜಿನ್ ಸಾಮರ್ಥ್ಯ ಮತ್ತು ಇಂಧನ ಪ್ರಕಾರ (ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್) ಇವುಗಳನ್ನು ಆಧರಿಸಿ ವಿಭಿನ್ನ ತೆರಿಗೆ ದರಗಳು ಅನ್ವಯಿಸುತ್ತವೆ.
ಈಗ ಜಿಎಸ್‌ಟಿ ಬದಲಾವಣೆಗಳ ಬಳಿಕ ವಾಹನಗಳ ಎಕ್ಸ್-ಶೋರೂಂ ಬೆಲೆಯಲ್ಲಿ ಇಳಿಕೆಯಾಗಲಿದೆ. ಯಾವ ಕಾರುಗಳ ಬೆಲೆ ಎಷ್ಟು ಇಳಿಕೆಯಾಗಲಿದೆ? ಎಂಬ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ವ್ಯಾಗನರ್. ಹೊಸ ಎಕ್ಸ್-ಶೋರೂಂ ಬೆಲೆ (ಅಂದಾಜು) 5.29 ಲಕ್ಷ ರೂ. ಆಗಲಿದೆ. ಹಳೆಯ ಎಕ್ಸ್-ಶೋರೂಂ ಬೆಲೆ (ಅಂದಾಜು) 5.79 ಲಕ್ಷ ರೂ. ಇತ್ತು. ದರ ಕಡಿತ ಶೇ 8.60% ಎಂದು ಅಂದಾಜಿಸಲಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಎಕ್ಸ್-ಶೋ ರೂಂ ಬೆಲೆ 5.93 ಲಕ್ಷ ರೂ, ಹಳೆಯ ಎಕ್ಸ್-ಶೋರೂಂ ಬೆಲೆ 6.49 ಲಕ್ಷ ರೂ. ಕಡಿತ 8.60%.
ಮಾರುತಿ ಸುಜುಕಿ ಡಿಸೈರ್ ಹೊಸ ಎಕ್ಸ್-ಶೋ ರೂಂ ಬೆಲೆ 6.25 ಲಕ್ಷ ರೂ. ಹಳೆಯ ಎಕ್ಸ್-ಶೋರೂಂ ಬೆಲೆ 6.84 ಲಕ್ಷ ರೂ, ಕಡಿತ 3.60%.
ವೋಕ್ಸ್‌ವ್ಯಾಗನ್ ವರ್ಚುಸ್ ಹೊಸ ಎಕ್ಸ್-ಶೋರೂಂ ಬೆಲೆ 11.14 ಲಕ್ಷ ರೂ., ಹಳೆಯ ಎಕ್ಸ್-ಶೋರೂಂ ಬೆಲೆ 11.55 ಲಕ್ಷ ರೂ. ಆಗಿದ್ದು ಕಡಿತ 3.60%.
ಟಾಟಾ ಪಂಚ್ ಹೊಸ ಎಕ್ಸ್-ಶೋರೂಂ ಬೆಲೆ 5.66 ಲಕ್ಷ ರೂ. ಆಗಿದೆ. ಹಳೆಯ ಎಕ್ಸ್-ಶೋರೂಂ ಬೆಲೆ 6.19 ಲಕ್ಷ ರೂ. ಆಗಿದ್ದು, ಕಡಿತ 8.60%.
ಮಾರುತಿ ಸುಜುಕಿ ಬ್ರಿಝಾ ಹೊಸ ಎಕ್ಸ್-ಶೋರೂಂ ಬೆಲೆ 8.37 ಲಕ್ಷ ರೂ. ಆಗಲಿದೆ. ಹಳೆಯ ಎಕ್ಸ್-ಶೋರೂಂ ಬೆಲೆ 8.68 ಲಕ್ಷ ರೂ. ಆಗಿದ್ದು, ಕಡಿತ 3.60%.
ಹುಂಡೈ ಕ್ರೆಟಾ ಹೊಸ ಎಕ್ಸ್-ಶೋರೂಂ ಬೆಲೆ 10.71 ಲಕ್ಷ ರೂ. ಆಗಲಿದೆ. ಹಳೆಯ ಎಕ್ಸ್-ಶೋರೂಂ ಬೆಲೆ 11.1 ಲಕ್ಷ ರೂ. ಆಗಿದ್ದು, ಕಡಿತ 6.80%.
ಮಹೀಂದ್ರ XUV700 ಹೊಸ ಎಕ್ಸ್-ಶೋ ರೂಂ ಬೆಲೆ 13.51 ಲಕ್ಷ ರೂ. ಆಗಲಿದೆ. ಹಳೆಯ ಎಕ್ಸ್-ಶೋರೂಂ ಬೆಲೆ 14.49 ಲಕ್ಷ ರೂ. ಆಗಿದ್ದು, ಕಡಿತ 3.60%.
ಟೊಯೋಟಾ ಇನ್ನೋವಾ ಕ್ರಿಸ್ಟಾ ಹೊಸ ಎಕ್ಸ್-ಶೋರೂಂ ಬೆಲೆ 8.79 ಲಕ್ಷ ರೂ. ಆಗಲಿದೆ. ಹಳೆಯ ಎಕ್ಸ್-ಶೋರೂಂ ಬೆಲೆ 9.11 ಲಕ್ಷ ರೂ. ಆಗಿದ್ದು, ಕಡಿತ 6.80%.