5 ವರ್ಷದ ಬಳಿಕ ರೆಪೋ ದರ ಕಡಿತ ಮಾಡಿದ RBI

0
19

ರೆಪೊ ದರವನ್ನು ಶೇಕಡಾ 0.25 ರಷ್ಟು ಕಡಿತ

ನವದೆಹಲಿ: ಆರ್‌ಬಿಐ ರೆಪೊ ದರವನ್ನು ಶೇ 0.25 ರಷ್ಟು ಕಡಿತಗೊಳಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಇದು ಕಳೆದ ಐದು ವರ್ಷಗಳ ನಂತರ ಆರ್‌ಬಿಐ ರೆಪೋ ದರ ಕಡಿತಗೊಳಿಸಿದ್ದು. ಈಗ ರೆಪೊ ದರ ಶೇ.6.50 ರಿಂದ ಶೇ.6.25 ಕ್ಕೆ ಇಳಿದಿದೆ. ಈ ಹಿನ್ನಲೆಯಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಇಳಿಕೆ ಆಗಲಿದೆ. ವಾಣಿಜ್ಯ ಬ್ಯಾಂಕುಗಳು ಎಲ್ಲಾ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಿವೆ. ಕಳೆದ 5 ವರ್ಷಗಳಲ್ಲಿ ಇದೇ ಮೊದಲು ಬಾರಿಗೆ ಆರ್‌ಬಿಐ ರೆಪೊ ದರ ಇಳಿಕೆ ಮಾಡಿದೆ. 2020ರ ಮೇಯಲ್ಲಿ ಕೊನೆಯ ಬಾರಿಗೆ ರೆಪೊ ದರ ಕಡಿತಗೊಳಿಸಲಾಗಿತ್ತು.

ಸಾಲವನ್ನು ಅಗ್ಗವಾಗಿಸುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಖರ್ಚು ಮತ್ತು ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ ಆರ್‌ಬಿಐನ ಎಂಪಿಸಿ, ಸರ್ವಾನುಮತದ ನಿರ್ಧಾರದಲ್ಲಿ ರೆಪೊ ದರವನ್ನು ಕಡಿಮೆ ಮಾಡಿದೆ.

Previous articleಮುಡಾ ಕೇಸ್, ಪೋಕ್ಸೊ ಕೇಸ್, ಹೈಕೋರ್ಟ್ ಅಂತಿಮ ಆದೇಶ ಇಂದು ಸಿದ್ದರಾಮಯ್ಯ, ಬಿಎಸ್‌ವೈಗೆ ಇಂದು ಬಿಗ್ ಡೇ
Next articleಪೋಕ್ಸೋ ಪ್ರಕರಣ​: ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್