Home ಸುದ್ದಿ ವಿದೇಶ 128 ಗಂಟೆ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತ

128 ಗಂಟೆ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತ

0

ಕಳೆದ ಸೋಮವಾರ 7.8 ತೀವ್ರತೆಯ ಭೂಕಂಪದ ನಂತರ ಟರ್ಕಿ ತತ್ತರಿಸಿದೆ. ಸುಮಾರು 25 ಸಾವಿರ ಸಾವಿನ ಸಂಖ್ಯೆ, 6,000 ಕ್ಕೂ ಹೆಚ್ಚು ಕಟ್ಟಡಗಳ ಕುಸಿತ, ಹಲವು ಬಾರಿ ಭೂಕಂಪಗಳು ಸಂಭವಿಸಿದೆ. ಎರಡು ತಿಂಗಳ ಮಗುವನ್ನು ನಿನ್ನೆ ಟರ್ಕಿಯ ಅವಶೇಷಗಳಡಿಯಿಂದ ರಕ್ಷಿಸಲಾಗಿದ್ದು, ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಏಕೆಂದರೆ, ಭೀಕರ ಭೂಕಂಪ ಸಂಭವಿಸಿ ಸುಮಾರು 128 ಗಂಟೆಗಳ ನಂತರವೂ ಮಗು ಜೀವಂತವಾಗಿ ಪತ್ತೆಯಾಗಿದೆ. ಇಡೀ ಊರಿಗೆ ಊರೇ ಸ್ಮಶಾನದಂತಾಗಿದೆ. ಆದರೆ ವಿನಾಶ ಮತ್ತು ಹತಾಶೆಯ ಮಧ್ಯೆ, ಬದುಕುಳಿದಿರುವ ಅದ್ಭುತ ಕಥೆಗಳು ಹೊರಹೊಮ್ಮತ್ತಿದೆ.

Exit mobile version