ಒಂದಲ್ಲಾ ಒಂದು ಸುದ್ದಿಯಲ್ಲಿ ಚರ್ಚೆಯಾಗುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದೀಗ ಟ್ರಂಪ್‌ರವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್, ಅಮೆರಿಕದ ಬಿಲಿಯನೇರ್ ಉದ್ಯಮಿ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಮತ್ತು ಉದ್ಯಮಿ ವಂಶಿ ಗಡಿರಾಜು ಅವರ ಅದ್ದೂರಿ ವಿವಾಹದಲ್ಲಿ ಭಾಗವಹಿಸಲು ಶುಕ್ರವಾರ ರಾತ್ರಿ ಉದಯಪುರಕ್ಕೆ ಆಗಮಿಸಿದರು.
ಮಾಹಿತಿಯ ಪ್ರಕಾರ, ಟ್ರಂಪ್ ಜೂನಿಯರ್ ಈ ವಾರದ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರಕ್ಕೆ ವೈಯಕ್ತಿಕ ಭೇಟಿಗಾಗಿ ಆಗಮಿಸಿದ್ದರು. ಅಲ್ಲಿದ್ದಾಗ, ಅವರು ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ವನ್ಯಜೀವಿ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರವಾದ ವಂತರಾಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ರಾತ್ರಿ ವಂತರಾದಿಂದ ಉದಯಪುರಕ್ಕೆ ಪ್ರಯಾಣ ಬೆಳೆಸಿದರು.
ನಗರದಲ್ಲಿ ವಿಐಪಿ ಅತಿಥಿಗಳ ಆಗಮನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಉದಯಪುರ ಎಸ್ಪಿ ಯೋಗೇಶ್ ಗೋಯಲ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಅತ್ಯಂತ ಪ್ರಮುಖ ಅತಿಥಿಯಾಗಿರುತ್ತಾರೆ. ಹಾಗೇ ಜೂನಿಯರ್ ಟ್ರಂಪ್ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಹೆಚ್ಚುವರಿ ಪಡೆಗಳನ್ನು ಕರೆಸಲಾಗಿದೆ” ಎಂದು ಎಸ್ಪಿ ಹೇಳಿದರು.
ರಾಶಿ, ನಕ್ಷತ್ರ ಸಾಂಪ್ರದಾಯಿಕವಾಗಿ ಮದುವೆ: ಉದಯಪುರದಲ್ಲಿ, ಅಮೆರಿಕ ಅಧ್ಯಕ್ಷರ ಪುತ್ರ ನವೆಂಬರ್ 21 ರಿಂದ 24 ರವರೆಗೆ ನಡೆಯಲಿರುವ ವಿವಾಹ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಭಾರತ ಮತ್ತು ವಿದೇಶಗಳ ವಿವಿಧ ಗಣ್ಯರು ವಿವಾಹದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಶುಕ್ರವಾರ ರಾತ್ರಿ ನಡೆದ ಹಲ್ದಿ ಸಮಾರಂಭದಲ್ಲಿ ಭಾಗವಹಿಸಲು, ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಕೃತಿ ಸನೋನ್ ಹಾಗೂ ಗಾಯಕಿ ಸೋಫಿಯಾ ಚೌಧರಿ ಮಧ್ಯಾಹ್ನ ದಬೋಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮಾಹಿತಿಗಳ ಪ್ರಕಾರ, ನಟರಾದ ಹೃತಿಕ್ ರೋಷನ್, ರಣಬೀರ್ ಕಪೂರ್ ಮತ್ತು ಶಾಹಿದ್ ಕಪೂರ್ ಕೂಡ ಅತಿಥಿಗಳಾಗಿ ಭಾಗವಹಿಸುವ ಸಾಧ್ಯತೆಯಿದೆ.
ಉದಯಪುರದ ಪಿಚೋಲಾ ಸರೋವರದ ಮಧ್ಯದಲ್ಲಿರುವ ಜಗಮಂದಿರ್ ದ್ವೀಪ ಅರಮನೆ ಸೇರಿದಂತೆ ಉದಯಪುರದ ಹಲವಾರು ಸ್ಥಳಗಳಲ್ಲಿ ವಿವಾಹ ಮಹೋತ್ಸವಗಳು ನಡೆಯಲಿವೆ.
ಗಾಯಕಿ ಜೆನ್ನಿಫರ್ ಲೋಪೆಜ್ ಮದುವೆಯಲ್ಲಿ ಪ್ರದರ್ಶನ ನೀಡುವ ಸಾಧ್ಯತೆ ಇದ್ದು, ಅವರು ಶನಿವಾರ ಬೆಳಗಿನ ಜಾವ 2 ಗಂಟೆಗೆ ಉದಯಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಜಸ್ಟಿನ್ ಬೀಬರ್ ಭಾಗವಹಿಸಲಿದ್ದಾರೆ ಎಂಬ ವದಂತಿಯೂ ಇದೆ, ಆದರೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.
ಜೈಪುರದ ಹಾಥಿ ಗಾಂವ್‌ನಿಂದ ಆನೆಯನ್ನು ಮದುವೆಗಾಗಿ ಉದಯಪುರಕ್ಕೆ ಕಳುಹಿಸಲಾಗಿದೆ. ಬಾಬು ಎಂಬ ಹೆಸರಿನ ಆನೆಯನ್ನು ನೈಸರ್ಗಿಕ ಬಣ್ಣಗಳು ಮತ್ತು ವಿಶೇಷ ಆಭರಣಗಳಿಂದ ಅಲಂಕರಿಸಲಾಗುವುದು.
ಈ ಮದುವೆಗಾಗಿ ವಿಶೇಷ ಕೋರಿಕೆಯ ಮೇರೆಗೆ ಬಾಬು ಅವರನ್ನು ಕಳುಹಿಸಲಾಗಿದೆ ಎಂದು ಹಾಥಿ ಗಾಂವ್ ವಿಕಾಸ್ ಸಮಿತಿಯ ಅಧ್ಯಕ್ಷ ಬಲ್ಲು ಖಾನ್ ಹೇಳಿದ್ದಾರೆ. “ವರನು ನಮ್ಮ ಆನೆಯಾದ ಬಾಬು ಮೇಲೆ ಹತ್ತಿ ಬಾಗಿಲು ಒಡೆಯುತ್ತಾನೆ. ಇಬ್ಬರು ಮಾವುತರು ಆನೆಯೊಂದಿಗೆ ಉದಯಪುರಕ್ಕೆ ಹೋಗಿ ಶುಕ್ರವಾರ ಬೆಳಿಗ್ಗೆ ಅದನ್ನು ತಲುಪಿದರು” ಎಂದು ಬಲ್ಲು ಖಾನ್ ಹೇಳಿದರು.
ಅದ್ದೂರಿ ಸಂಭ್ರಮ: ರಣವೀರ್ ಸಿಂಗ್ ಅವರು ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಅವರ ಗೆಳತಿ ಬೆಟ್ಟಿನಾ ಆಂಡರ್ಸನ್ ಅವರನ್ನು ತಾರಾಬಳಗದ ಸಂಗೀತ ಕಾರ್ಯಕ್ರಮದಲ್ಲಿ ‘ವಾಟ್ ಜುಮ್ಕಾ’ ಹಾಡಿಗೆ ನೃತ್ಯ ಮಾಡಿಸಿದರು.
