Home News ಹತ್ಯೆಯಾದ ಆಕಾಂಕ್ಷಾಗೆ ಶೇ. ೫೯ ಫಲಿತಾಂಶ

ಹತ್ಯೆಯಾದ ಆಕಾಂಕ್ಷಾಗೆ ಶೇ. ೫೯ ಫಲಿತಾಂಶ

ಕೊಪ್ಪಳ: ತಂದೆ-ತಾಯಿಯೊಂದಿಗೆ ಹತ್ಯೆಯಾದ ಆಕಾಂಕ್ಷಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ೫೯.೦೪ರಷ್ಟು ಫಲಿತಾಂಶ ಪಡೆದಿದ್ದಾಳೆ.
ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಸ್ಕೂಲ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಆಕಾಂಕ್ಷಾ ಗದಗನಲ್ಲಿ ಈಚೆಗೆ ತಂದೆ-ತಾಯಿಗಳೊಂದಿಗೆ ಕೊಲೆಯಾಗಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಆಕಾಂಕ್ಷಾ ಫಲಿತಾಂಶ ನೋಡಿದೇ ಜಗತ್ತಿನಿಂದಲೇ ಕಣ್ಮರೆಯಾಗಿರುವುದು ವಿಷಾಧನೀಯ.
ಸದ್ಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ೩೬೯ ಅಂಕ ಪಡೆದ ಆಕಾಂಕ್ಷಾ ಶೇ. ೫೯.೦೪ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಉತ್ತಮವಾಗಿ ಓದಿ, ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂಬ ಆಕಾಂಕ್ಷಾ ಕನಸು ಕನಸಾಗಿಯೇ ಉಳಿದಿರುವುದು ದುರಾದೃಷ್ಟಕರ

Exit mobile version