ಹಂಪಿ ಎಲ್ಲಮ್ಮ ದೇವಿ ಕಳಶ ಕಳವು

0
7

ಹೊಸಪೇಟೆ: ವಿಜಯನಗರ ಕಾಲದ ಅತ್ಯಂತ ಮಹತ್ವದ ಹಿನ್ನೆಲೆ ಹೊಂದಿರುವ ಹಂಪಿಯ ಎಲ್ಲಮ್ಮ ದೇವಿಯ ದೇವಸ್ಥಾನದ ಮೇಲಿನ ಪಂಚಲೋಹದ ಕಳಸ ಕಳುವಾಗಿದೆ.
ಕಳಶ ಕಳವು ಮಾಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಹಂಪಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಕಮಲ ಮಹಲ್ ಆವರಣದಲ್ಲಿ ಶ್ರೀಗಂಧದ ಮರ ಕಳವು ಮಾಡಲಾಗಿತ್ತು. ಈಗ ಪಂಚಲೋಹ ಕಳಶ ಕಳುವಾಗಿತ್ತು. ಈ ಕೂಡಲೇ ಪೊಲೀಸ್ ಅಧಿಕಾರಿಗಳು ದೂರನ್ನು ದಾಖಲಿಸಿಕೊಂಡು ಕಳಸವನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡಬೇಕೆಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ಒತ್ತಾಯಿಸಿದ್ದಾರೆ.

Previous articleಗ್ಯಾಂಗ್ ರೇಪ್ ಪ್ರಕರಣ: ಮತ್ತೆ ನಾಲ್ವರ ಬಂಧನ
Next articleನಿವೃತ್ತ ತಹಶೀಲ್ದಾರ್ ಮನೆಗೆ ಬೆಂಕಿ: ಹಾನಿ