ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರತಂತೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಹೇಳಿಕೆ ವಿರೋದಿಸಿ #Boycottphonepay ಅಭಿಯಾನ ಶುರುವಾಗಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕನ್ನಡಿಗರು ಸಿಡಿದೆದ್ದಿದ್ದು, ಫೋನ್ ಪೇ ಅನ್ ಇನ್ಸ್ಟಾಲ್ ಮಾಡುವ ಮೂಲಕ ಹಾಗೂ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿ ಫೋನ್ ಪೇ ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ʼಫೋನ್ ಪೇʼ ಬಾಯ್ಕಾಟ್ #Boycottphonepay , #UninstallPhonepay ಅಭಿಯಾನ ಆರಂಭವಾಗಿದೆ.