Home ಸುದ್ದಿ ದೇಶ ಪ್ರಿಯಕರನ ಕ್ರೂರ ಹತ್ಯೆ: ಶವದೊಂದಿಗೆ ಮದುವೆಯಾದ ಯುವತಿ

ಪ್ರಿಯಕರನ ಕ್ರೂರ ಹತ್ಯೆ: ಶವದೊಂದಿಗೆ ಮದುವೆಯಾದ ಯುವತಿ

0

ನಾಂದೇಡ್ (ಮಹಾರಾಷ್ಟ್ರ): ಪ್ರೇಮದ ಮೇಲೆ ಜಾತಿ ಬಲವಂತವಾಗಿ ಆವರಿಸುವ ಕ್ರೌರ್ಯಕ್ಕೆ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ನಾಂದೇಡ್ ಜಿಲ್ಲೆಯ ಹಳೆಯ ಗಂಜ್ ಪ್ರದೇಶದಲ್ಲಿ ಸಂಭವಿಸಿದೆ. 21 ವರ್ಷದ ಯುವತಿ ಆಂಚಲ್ ಮಾಮಿದ್ವಾರ್ ತನ್ನ 20 ವರ್ಷದ ಪ್ರೇಮಿ ಸಕ್ಷಮ್ ಟೇಟ್ ಅವರ ಶವದೊಂದಿಗೆ ಸಂಕೇತವಾಗಿ “ಮದುವೆ” ಆಗುವ ಮೂಲಕ ತನ್ನ ಪ್ರೀತಿಯ ಗಾಢತೆಯನ್ನು, ಮತ್ತು ತನ್ನದೇ ಕುಟುಂಬ ಮಾಡಿದ ಹತ್ಯೆಯ ವಿರುದ್ಧದ ಪ್ರತಿರೋಧವನ್ನು ಲೋಕಕ್ಕೆ ತೋರಿಸಿದ್ದಾಳೆ.

ಶವದ ಎದುರು ಸಾಂಪ್ರದಾಯಿಕ ಮದುವೆ—ಕಣ್ಣೀರಿನಲ್ಲಿ ಸಂಕೇತ ಹೋರಾಟ: ಸಕ್ಷಮ್ ಅವರ ಅಂತಿಮ ವಿಧಿವಿಧಾನಗಳಿಗೆ ಸಿದ್ಧತೆ ನಡೆಯುತ್ತಿದ್ದಾಗ, ಆಂಚಲ್ ಅವರು ಅವರ ಮನೆಯಲ್ಲೇ ಶವದ ಪಕ್ಕದಲ್ಲಿ ಮದುವೆಯ ಸಾಂಪ್ರದಾಯಿಕ ವಿಧಿ ನಡೆಸಿದರು. ಈ ದೃಶ್ಯವನ್ನು ಅಲ್ಲಿಯ ಸ್ಥಳಿಯರು ಮೊಬೈಲ್‌ನಲ್ಲಿ ಸೆರಡ ಹಿಡಿದ್ದಾರೆ. ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ವೈರಲ್‌ ಆಗಿವೆ.

ನನ್ನ ಪ್ರೀತಿಯನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕು: ಆಂಚಲ್, ನಂತರ ಸುದ್ದಿಗಾರರ ಮುಂದೆ ಕಣ್ಣೀರಿನಿಂದ ಮಾತನಾಡಿ “ನಾನು ಸಕ್ಷಮ್‌ನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಜಾತಿಯ ಗೊಂದಲದಿಂದ ಕಾರಣ ನನ್ನ ತಂದೆ ನಮ್ಮ ಸಂಬಂಧವನ್ನು ವಿರೋಧಿಸಿದರು. ನನ್ನ ತಂದೆ ಮತ್ತು ಸಹೋದರರು ಹಲವಾರು ಬಾರಿ ಸಕ್ಷಮ್‌ನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈಗ ಅವರು ಅದನ್ನೇ ಮಾಡಿದ್ದಾರೆ. ಅವರಿಗೆ ಮರಣದಂಡನೆ ವಿಧಿಸಬೇಕು” ಎಂದು ಬೇಡಿಕೊಂಡರು.

ಘಟನೆ ಹೇಗೆ ನಡೆದಿದೆ?: ಬಲ್ಲ ಮೂಲಗಳ ಮಾಹಿತಯ ಪ್ರಕಾರ ಗುರುವಾರ ಸಂಜೆ ಸಕ್ಷಮ್ ತಮ್ಮ ಸ್ನೇಹಿತರೊಂದಿಗೆ ನಿಂತಿದ್ದಾಗ ಆಂಚಲ್ ಅವರ ಸಹೋದರ ಹಿಮೇಶ್ ಮಾಮಿದ್ವಾರ್ ಜೊತೆ ಜಗಳ ಶುರುವಾಯಿತು. ಜಗಳ ತೀವ್ರಗೊಂಡು ಹಿಮೇಶ್, ತನ್ನ ಸಹೋದರ ಸಾಹಿಲ್ ಮತ್ತು ತಂದೆ ಗಜಾನನ್—ಈ ಮೂವರು ಸಕ್ಷಮ್ ಮೇಲೆ ದಾಳಿ ನಡೆಸಿದರು.ದಾಳಿಯ ತೀವ್ರತೆಯಿಂದ ಸಕ್ಷಮ್ ಸ್ಥಳದಲ್ಲೇ ಸಾವನ್ನಪ್ಪಿದರು. ಮೂವರನ್ನೂ ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.

ಇನ್ನು ಮುಂದೆ ನಾನು ಸಕ್ಷಮ್‌ನ ಮನೆಯಲ್ಲೇ ಇರ್ತೀನಿ: ಆಂಚಲ್ ತನ್ನ ಪ್ರೀತಿಯ ನೆನಪು ಉಳಿಸಿಕೊಳ್ಳುವ ಸಲುವಾಗಿ “ಇನ್ನು ಮುಂದೆ ನಾನು ಸಕ್ಷಮ್‌ನ ಮನೆದಲ್ಲೇ ಇರುತ್ತೇನೆ” ಎಂದಿದ್ದಾರೆ.

ಈ ಘಟನೆ ಬಳಿಕ “ಜಾತಿ ಭೇದದ ಹೆಸರಿನಲ್ಲಿ ಪ್ರೇಮ ಹತ್ಯೆ” ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version