ಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾವು: ಮೂವರು ASIಗಳು ಅಮಾನತು

0
26

ಮಂಡ್ಯ: ಮಂಡ್ಯ ಸಂಚಾರ ಪೊಲೀಸರ ಎಡವಟ್ಟಿನಿಂದ ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ,
ನಗರದ ಸ್ವರ್ಣಸಂದ್ರ ಬಳಿ ತಪಾಸಣೆ ವೇಳೆ ಬೈಕ್ ಅಡ್ಡಗಟ್ಟಿದಾಗ ಕೆಳಗೆ ಬಿದ್ದ ಮಗು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹೇಶ್ ಪುತ್ರಿ ರಿತಿಕ್ಷಾ (3) ಮೃತಪಟ್ಟ ಮಗು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್​ಐಗಳಾದ ಜಯರಾಮ್​, ನಾಗರಾಜ್​, ಗುರುದೇವ್ ಅವರನ್ನು ಅಮಾನತು ಮಾಡಲಾಗಿದೆ. ಮಹೇಶ್ ಅವರು ತನ್ನ ಪತ್ನಿ ಹಾಗೂ ತನ್ನ ಮೂರು ವರ್ಷದ ಮಗಳನ್ನು ಮಿಮ್ಸ್ ಆಸ್ಪತ್ರೆಗೆ ನಾಯಿ ಕಡಿತದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಕರೆತರುತ್ತಿದ್ದರು. ಈ ವೇಳೆ ಸಂಚಾರಿ ಪೊಲೀಸರು ಹೆಲ್ಮಟ್ ಧರಿಸದಿರುವ ಬೈಕ್ ಸವಾರರ ತಡೆದು ತಪಾಸಣೆ ನಡೆಸುತ್ತಿದ್ದರು.

Previous articleಹಳೇ ವಿದ್ಯಾರ್ಥಿಗಳಿಂದ ಗುರುವಂದನೆ
Next articleಬಾಣಂತಿ ಸಾವು: ಕುಟುಂಬದವರಿಂದ ಆಕ್ರೋಶಗೊಂಡು ಅಂಬ್ಯುಲೆನ್ಸ್ ಧ್ವಂಸ