Home ನಮ್ಮ ಜಿಲ್ಲೆ ಕೊಪ್ಪಳ ಸಂಚಾರ ದಟ್ಟಣೆ: ಆ್ಯಂಬುಲೆನ್ಸ್ ಗೆ ಅಡಚಣೆ

ಸಂಚಾರ ದಟ್ಟಣೆ: ಆ್ಯಂಬುಲೆನ್ಸ್ ಗೆ ಅಡಚಣೆ

0

ಕೊಪ್ಪಳ: ನಗರದ ಅಶೋಕ ವೃತ್ತದ ಸುತ್ತಲು ಭಾನುವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಮಾನವ ಸರಪಳಿ ನಿರ್ಮಿಸಲಾಗಿದ್ದು, ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಯಿತು. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಗೆ ಸಂಚಾರಕ್ಕೂ ಅಡಚಣೆ ಉಂಟಾಯಿತು.

ರೋಗಿಯನ್ನು ಕರೆದುಕೊಂಡು ನಗರದ ಜಿಲ್ಲಾಸ್ಪತ್ರೆಗೆ ಹೊರಡುತ್ತಿದ್ದ ಆ್ಯಂಬುಲೆನ್ಸ್ ಅಶೋಕ ವೃತ್ತದ ಬಳಿ ಸೈರನ್ ಹಾಕುತ್ತಾ ಆ್ಯಂಬುಲೆನ್ಸ್ ಬಂದಿದ್ದು, ಯಾವೊಬ್ಬ ಪೊಲೀಸರು ಕೂಡಾ ಆ್ಯಂಬುಲೆನ್ಸಗೆ ದಾರಿ ಮಾಡಿ ಕೊಡಲಿಲ್ಲ. ಇದರಿಂದಾಗಿ ಮತ್ತೆ ಆ್ಯಂಬುಲೆನ್ಸನ್ನು ಹಿಂದಕ್ಕೆ ತೆಗೆದುಕೊಂಡು, ಬೇರೆ ಮಾರ್ಗದಲ್ಲಿ ಕಳುಹಿಸಲಾಯಿತು.

Exit mobile version