Home ಅಪರಾಧ ಶಿರಾಡಿಘಾಟ್ ಅಪಘಾತ: ತಾಯಿ, ಮಗ ಸಾವು

ಶಿರಾಡಿಘಾಟ್ ಅಪಘಾತ: ತಾಯಿ, ಮಗ ಸಾವು

0

ಮಂಗಳೂರು: ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಇನ್ನೋವಾ ಹಾಗೂ ಕಂಟೇನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬಂಟ್ವಾಳ ಪಾಣೆ ಮಂಗಳೂರಿನ ತಾಯಿ, ಮಗ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಇನ್ನೋವಾ ಕಾರಿನಲ್ಲಿದ್ದ ಪಾಣೆ ಮಂಗಳೂರು ಸಮೀಪದ ಬೊಂಡಾಲ ಗ್ರಾಮದ ಶಬೀರ್ ಅಹಮ್ಮದ್ ಎಂಬುವರ ಪತ್ನಿ ಶಫಿಯಾ(೪೮) ಹಾಗೂ ಅವರ ಪುತ್ರ ಶಫೀಕ್(೨೧) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ ಮಕ್ಕಳು ಸೇರಿ ೬ ಮಂದಿ ಇದ್ದು, ಎಲ್ಲರಿಗೂ ಗಂಭೀರ ಸ್ವರೂಪದ ಗಾಯಗಳಾಗಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರನಹಳ್ಳಿಯಿಂದ ಸುಮಾರು ಎಂಟು ಕಿಲೋಮೀಟರ್ ದೂರದ ಶಿರಾಡಿ ಘಾಟ್‌ನಲ್ಲಿ ಮಂಗಳವಾರ ಬೆಳಗ್ಗೆ ೬.೩೦ರ ವೇಳೆ ಘಟನೆ ನಡೆದಿದೆ. ಸಕಲೇಶಪುರದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರು ಕಡೆಯಿಂದ ತೆರಳುತ್ತಿದ್ದ ಕಂಟೈನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version