ಶರಾವತಿ ಸಿಂಗಳೀಕ ಅಭಯಾರಣ್ಯದಲ್ಲಿ ಹುಲಿ ಪ್ರತ್ಯಕ್ಷ

0
22

ಶಿವಮೊಗ್ಗ: ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ವನ್ಯಜೀವಿಗಳಿಗಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಗೆ ಅನುಕೂಲವಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಹುಲಿಯೊಂದು ಇಲ್ಲಿನ ಅರಣ್ಯ ಇಲಾಖೆ ನಿರ್ಮಿಸಿರುವ ಕಟ್ಟೆಯಲ್ಲಿ ನೀರು ಕುಡಿದು ಮುಂದಕ್ಕೆ ಸಾಗಿದೆ.
ಈ ದೃಶ್ಯ ಅರಣ್ಯ ಇಲಾಖೆ ಇಟ್ಟಿರುವ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿಶ್ವವನ್ಯಜೀವಿ ದಿನದ ಅಂಗವಾಗಿ ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕುರಿತು ಮಾಹಿತಿ ನೀಡುವ ವೇಳೆ ಅಧಿಕಾರಿಗಳು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Previous articleದೀಡ್ ನಮಸ್ಕಾರದೊಂದಿಗೆ 600 ಕಿ.ಮೀ. ಕ್ರಮಿಸುತ್ತಿರುವ ಭಕ್ತರು
Next article92 ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವ್ಯಾಪಕ ನೆಗಡಿ-ಜ್ವರ