ಸುಮೋಟೋ ಕೇಸ್ ದಾಖಲಿಸಿದ ಪೊಲೀಸ್ ಇಲಾಖೆ
ವಿಜಯಪುರ : ಪಹಾಲ್ಗಮ್ ಉಗ್ರ ದಾಳಿಗೆ ಪ್ರತೀಕರವಾಗಿ ಭಾರತೀಯ ಸೇನೆ ಪಾಕ್ ಮೇಲೆ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ ಪಾರೂಖಿ ಶೇಖ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾಕಿಸ್ತಾನದ ಮೇಲೆ ಪ್ರೇಮ ತೋರಿಸಿದ್ದಾಳೆ.
ಪಾಕಿಸ್ತಾನಿ ಗೆಳೆಯರೇ, ಸಹೋದರರೇ, ಜಮ್ಮು ಕಾಶ್ಮೀರದ ಜನರೇ ಬಾರ್ಡರ್ ನಿಂದ 200 ಕಿ.ಮೀ. ದೂರ ಇರಿ. ಸೇನಾ ನೆಲೆಗಳಿಂದಲೂ ದೂರಕ್ಕೆ ಹೋಗಿ ಭಾರತದ ದಾಳಿಯಿಂದ ರಕ್ಷಿಸಿಕೊಳ್ಳಿ ಅಲ್ಲಹಾ ರಕ್ಷಣೆ ಮಾಡುತ್ತಾನೆ ಎಂದು ಬರೆದುಕೊಂಡಿದ್ದು ಪೊಲೀಸ್ ಇಲಾಖೆ ಅವಳ ಮೇಲೆ ಸುಮೋಟೋ ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿದೆ.