Home ಸುದ್ದಿ ದೇಶ ರಾಜ್ಯಪಾಲರುಗಳ ಸಭೆ: ಗಡಿ ಭಾಗದ ಜನರಲ್ಲಿ ಹೆಚ್ಚಿದ ನಿರೀಕ್ಷೆ

ರಾಜ್ಯಪಾಲರುಗಳ ಸಭೆ: ಗಡಿ ಭಾಗದ ಜನರಲ್ಲಿ ಹೆಚ್ಚಿದ ನಿರೀಕ್ಷೆ

0

ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದ ಜಿಲ್ಲೆಗಳ ವಿವಿಧ ವಿಷಯಗಳ ಕುರಿತು ಉಭಯ ರಾಜ್ಯಗಳ ರಾಜ್ಯಪಾಲರ ನೇತೃತ್ವದಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಗಾಗಿ ಶುಕ್ರವಾರ ಕೊಲ್ಹಾಪುರಕ್ಕೆ ತೆರಳಿದ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಕೊಲ್ಹಾ‍ಪುರದಲ್ಲಿ ಇಂದು ನಡೆಯಲಿರುವ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಸಭೆ ಗಡಿ ಭಾಗದ ಜನರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ಗಡಿ ವಿವಾದದ ಕಾರಣ ಕಳೆದ ಐದು ದಶಕಗಳಿಂದ ತತ್ತರಿಸಿದ ಎರಡೂ ರಾಜ್ಯಗಳ ಹಳ್ಳಿಗಳ ಜನ ಕುತೂಹಲದಿಂದ ಕಾಯುವಂತಾಗಿದೆ. ವಿಶೇಷವಾಗಿ ಕುಡಿಯುವ ನೀರು, ರಸ್ತೆ, ಶೈಕ್ಷಣಿಕ ಸಮಸ್ಯೆ ಹಾಗೂ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಪಾಲರು– ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version