Home ಅಪರಾಧ ರಸ್ತೆ ಅಪಘಾತ: ಪ್ರಥಮ ದರ್ಜೆ ಗುತ್ತಿಗೆದಾರ ಸಾವು

ರಸ್ತೆ ಅಪಘಾತ: ಪ್ರಥಮ ದರ್ಜೆ ಗುತ್ತಿಗೆದಾರ ಸಾವು

0


ದಾವಣಗೆರೆ: ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಯುವ ನಾಯಕ, ಪ್ರಥಮ ದರ್ಜೆ ಗುತ್ತಿಗೆದಾರನೊಬ್ಬ ಮೃತಪಟ್ಟಿರುವ ಘಟನೆ ನಗರದ ಬಿಐeಟಿ ಕಾಲೇಜು ರಸ್ತೆಯಲ್ಲಿರುವ ಶ್ರೀಈಶ್ವರ ಧ್ಯಾನ ಮಂದಿರ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ನಗರದ ಬನಶಂಕರಿ ಬಡಾವಣೆಯ ನಿವಾಸಿ ಸುರೇಶ್ ಪೈ ಮೃತಪಟ್ಟ ಕಾಂಗ್ರೆಸ್ ಯುವ ನಾಯಕ, ಪ್ರಥಮ ದರ್ಜೆ ಗುತ್ತಿಗೆದಾರ. ಮೃತರಿಗೆ ಪತ್ನಿ, ಪುತ್ರಿ, ಪುತ್ರ, ತಾಯಿ ಇದ್ದಾರೆ.
ತಾವೇ ಕಾರು ಚಲಾಯಿಸುತ್ತಿದ್ದಾಗ ಸುರೇಶ್ ಪೈ ಅವರಿಗೆ ಲೋ ಬಿಪಿ ಆಗಿದೆ. ಆ ಬಳಿಕ ಹೃದಯಘಾತಕ್ಕೊಳಗಾಗಿ ನಿಯಂತ್ರಣ ತಪ್ಪಿದೆ. ರಸ್ತೆ ಬದಿಯ ಗೋಡೆಗೆ ಕಾರು ಡಿಕ್ಕಿ ಹೊಡೆದಿದ್ದು, ಎದೆಗೆ ಸ್ಟೇರಿಂಗ್ ಬಲವಾಗಿ ಬಡಿದಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಸ್ಥಳೀಯ ಬನಶಂಕರಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ ೧ ಗಂಟೆಗೆ ಚನ್ನಗಿರಿ ತಾಲೂಕಿನ ನಲ್ಕುದುರೆ ಗೋಮಾಳದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೃತರ ಕುಟುಂಬ ವರ್ಗದವರು ತಿಳಿಸಿದ್ದಾರೆ.
ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಶೈಲಜಾ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version